ರಾಜಸ್ಥಾನದ ಖ್ಯಾತ ಸ್ವಯಂಘೋಷಿತ ದೇವಮಾನವ ಬಾಬಾ ಫಲಾಹಾರಿಯನ್ನು ಲೈಂಗಿಕ ದೌರ್ಜನ್ಯದಡಿಯಲ್ಲಿ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ (ಸೆ.23): ರಾಜಸ್ಥಾನದ ಖ್ಯಾತ ಸ್ವಯಂಘೋಷಿತ ದೇವಮಾನವ ಬಾಬಾ ಫಲಾಹಾರಿಯನ್ನು ಲೈಂಗಿಕ ದೌರ್ಜನ್ಯದಡಿಯಲ್ಲಿ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

70 ವರ್ಷದ ಸ್ವಯಂಘೋಷಿತ ದೇವಮಾನವ ಅಲ್ವಾರ್’ನಲ್ಲಿರುವ ತಮ್ಮ ಆಶ್ರಮದಲ್ಲಿ 21 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು ದಾಖಲಾಗಿತ್ತು. ಮೂರು ದಿನಗಳ ವಿಚಾರಣೆ ನಂತರ ಇಂದು ಅವರನ್ನು ಬಂಧಿಸಲಾಗಿದೆ. ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಸಂತ್ರಸ್ಥ ಮಹಿಳೆಯ ಪೋಷಕರು ಬಹಳ ಕಾಲದಿಂದ ಬಾಬಾ ಫಲಾಹಾರಿಯ ಅನುಯಾಯಿಗಳಾಗಿದ್ದರು. ಹೀಗಾಗಿ ಅಲ್ವಾರ್ ಆಶ್ರಮದೊಂದಿಗಿನ ಒಡನಾಟ ಚೆನ್ನಾಗಿತ್ತು. ಸಾಮಾನ್ಯವಾಗಿ ಗ್ರಹಣದ ದಿನ ಬಾಬಾ ಯಾರನ್ನೂ ಭೇಟಿ ಮಾಡುವುದಿಲ್ಲ. ಆದರೆ ಆ ರಾತ್ರಿ ತಮ್ಮ ರೂಮಿಗೆ ನನ್ನನ್ನು ಕರೆದಿದ್ದಾರೆ ಅಲ್ಲಿಯೇ ತಂಗುವಂತೆ ಒತ್ತಾಯಿಸಿದ್ದಾರೆ. ಆ. 07 ರಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

(ಚಿತ್ರಕೃಪೆ: ಯ್ಯೂಟ್ಯೂಬ್)