ಜೈಪುರ್(ಮಾ.02): ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.

ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೀಸೆ ಫೇಮಸ್ ಆಗಿದೆ. ಅಭಿನಂದನ್ ಅವರ ಹೇರ್‌ ಸ್ಟೈಲ್ ಫೇಮಸ್ ಆಗಿದೆ. ಅಷ್ಟೇ ಏಕೆ ಸ್ವತಃ ಅಬಿನಂಧನ್ ಅವರ ಹೆಸರೇ ಫೇಮಸ್ ಆಗಿದೆ.

ಅದರಂತೆ ಅಭಿನಂದನ್ ನಿನ್ನೆ ಸಂಜೆ ಭಾರತಕ್ಕೆ ಮರಳುವ ಸಂದರ್ಭದಲ್ಲಿ ಜನಿಸಿದ ಮಗುವಿಗೆ ಗಂಡು ಮಗುವಿಗೆ ರಾಜಸ್ಥಾನದ ದಂಪತಿ ಅಭಿನಂದನ್ ಎಂದು ನಾಮಕರಣ ಮಾಡಿದ್ದಾರೆ.

ನನ್ನ ಸೋಸೆ ನಿನ್ನೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ಐಎಎಫ್ ಪೈಲಟ್ ಗೆ ಗೌರವ ಸಲ್ಲಿಸಿದ್ದೇವೆ. ನಮ್ಮ ಪೈಲಟ್ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮಗುವಿನ ತಾತ ಅಲ್ವಾರ್ ಜಿಲ್ಲೆಯ ಜಾನೇಶ್ ಭೂತನಿ ಹೇಳಿದ್ದಾರೆ.

ಇನ್ನು ತಮ್ಮ ನಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ತಾಯಿ ಸಪ್ನಾ ದೇವಿ, ತಮ್ಮ ಮಗನೂ ಅಭಿನಂದನ್ ಅವರ ಹಾಗೆ ವೀರ ಯೋಧನಾಗಲಿ ಎಂದು ಹಾರೈಸಿದ್ದಾರೆ.