''ಗಂಡು ನವಿಲು ಬ್ರಹ್ಮಾಚಾರಿ ಪಕ್ಷಿ. ಹೆಣ್ಣು ನವಿಲಿನ ಜೊತೆ ಅದು ಸೆಕ್ಸ್ ಮಾಡುವುದಿಲ್ಲ. ಗಂಡು ನವಿಲಿನ ಕಣ್ಣೀರನ್ನು ಹೆಣ್ಣು ನವಿಲು ಕುಡಿಯುವುದರಿಂದ ಗರ್ಭಧಾರಣೆಯಾಗುತ್ತದೆ," ಎಂಬ ವಾದವನ್ನು ಅವರು ಮಂಡಿಸಿದರು. ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಹೈಕೋರ್ಟ್ ಜಡ್ಜ್, ನವಿಲು ಬ್ರಹ್ಮಚಾರಿಯಾಗಿರುವ ಕಾರಣಕ್ಕೆ ಶ್ರೀಕೃಷ್ಣನೂ ತನ್ನ ಮುಡಿಯಲ್ಲಿ ನವಿಲು ಗರಿ ಧರಿಸಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೈಪುರ: ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಕರೆಯಲು ಏನು ಕಾರಣ? ರಾಜಸ್ಥಾನ ಹೈಕೋರ್ಟ್'ನ ನ್ಯಾಯಮೂರ್ತಿ ಮಹೇಶ್ ಚಂದ್ರ ಶರ್ಮಾ ಪ್ರಕಾರ ನವಿಲು ಬ್ರಹ್ಮಚಾರಿ ಆಗಿರುವುದರಿಂದ ರಾಷ್ಟ್ರೀಯ ಪಕ್ಷವೆಂದು ಘೋಷಿಸಲಾಗಿದೆಯಂತೆ. ಗಂಡು-ಹೆಣ್ಣು ಮಿಲನದ ಸಹಜ ಕ್ರಿಯೆಯಂತೆಯೇ ನವಿಲಿನಲ್ಲೂ ಸಂತಾನೋತ್ಪತ್ತಿ ಆಗುತ್ತದೆ ಎಂಬುದು ವಿಜ್ಞಾನ ನಮಗೆ ಹೇಳಿರುವ ಪಾಠ. ಆದರೆ, ಲೈಂಗಿಕ ಸಂಭೋಗದಿಂದ ನವಿಲಿನ ಸಂತಾನೋತ್ಪತ್ತಿ ಆಗುವುದಿಲ್ಲ ಎಂಬ ಹೊಸ ವಾದವನ್ನ ಮಹೇಶ್ ಚಂದ್ರ ಶರ್ಮಾ ಹುಟ್ಟುಹಾಕಿದ್ದಾರೆ.
ನಿನ್ನೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ ಹೈಕೋರ್ಟ್ ನ್ಯಾಯಾಧೀಶರು, ಅದೇ ಹುರುಪಿನಲ್ಲಿ ನವಿಲಿನ ವಾದವನ್ನೂ ಮಂಡಿಸಿದ್ದಾರೆ.
''ಗಂಡು ನವಿಲು ಬ್ರಹ್ಮಾಚಾರಿ ಪಕ್ಷಿ. ಹೆಣ್ಣು ನವಿಲಿನ ಜೊತೆ ಅದು ಸೆಕ್ಸ್ ಮಾಡುವುದಿಲ್ಲ. ಗಂಡು ನವಿಲಿನ ಕಣ್ಣೀರನ್ನು ಹೆಣ್ಣು ನವಿಲು ಕುಡಿಯುವುದರಿಂದ ಗರ್ಭಧಾರಣೆಯಾಗುತ್ತದೆ," ಎಂಬ ವಾದವನ್ನು ಅವರು ಮಂಡಿಸಿದರು. ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಹೈಕೋರ್ಟ್ ಜಡ್ಜ್, ನವಿಲು ಬ್ರಹ್ಮಚಾರಿಯಾಗಿರುವ ಕಾರಣಕ್ಕೆ ಶ್ರೀಕೃಷ್ಣನೂ ತನ್ನ ಮುಡಿಯಲ್ಲಿ ನವಿಲು ಗರಿ ಧರಿಸಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೈಪುರದ ಗೋಶಾಲೆ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ| ಮಹೇಶ್ ಚಂದ್ರ ಶರ್ಮಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಮತ್ತು ಗೋಹಂತಕರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.
''ನೇಪಾಳ ದೇಶವು ಹಿಂದೂ ರಾಷ್ಟ್ರವಾಗಿರುವುದರಿಂದ ಅಲ್ಲಿ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಭಾರತದಲ್ಲೂ ಈ ಕೆಲಸವಾಗಬೇಕಿದೆ," ಎಂದು ನ್ಯಾ| ಶರ್ಮಾ ಹೇಳಿದ್ದಾರೆ. ತಮ್ಮನ್ನು ಗೋವಿನ ಆರಾಧಕ ಎಂದು ಕರೆದುಕೊಳ್ಳುವ ನ್ಯಾಯಮೂರ್ತಿಗಳು, ಕೋರ್ಟ್'ನಲ್ಲಿ ಗೋವಿನ ಮಹತ್ವದ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು.