ಇವತ್ತು ಭಾರತೀಯ ಸಿನಿರಸಿಕರಿಗೆ ಬಹಳ ವಿಶೇಷವಾದ ದಿನ. ಭಾರತೀಯ ಚಿತ್ರರಂಗದಲ್ಲೇ ತನ್ನದೇ ಆದ ಖದರ್, ಸ್ಟೈಲ್ ಮೂಲಕ ಖ್ಯಾತಿ ಗಳಿಸಿದ ಸೂಪರ್ ಸ್ಟಾರ್, ಡೈಲಾಗ್ ಕಿಂಗ್, ವಿಶ್ವ ಖ್ಯಾತಿಯ ಸ್ಟಾರ್ ರಜನೀಕಾಂತ್ ಹುಟ್ಟು ಹಬ್ಬ. ರಜನೀಕಾಂತ್ ಇವತ್ತು 67 ನೇ ವಸಂತಕ್ಕೆ ಕಾಲಿಡುತ್ತಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಂಗಳೂರು (ಡಿ.12): ಇವತ್ತು ಭಾರತೀಯ ಸಿನಿರಸಿಕರಿಗೆ ಬಹಳ ವಿಶೇಷವಾದ ದಿನ. ಭಾರತೀಯ ಚಿತ್ರರಂಗದಲ್ಲೇ ತನ್ನದೇ ಆದ ಖದರ್, ಸ್ಟೈಲ್ ಮೂಲಕ ಖ್ಯಾತಿ ಗಳಿಸಿದ ಸೂಪರ್ ಸ್ಟಾರ್, ಡೈಲಾಗ್ ಕಿಂಗ್, ವಿಶ್ವ ಖ್ಯಾತಿಯ ಸ್ಟಾರ್ ರಜನೀಕಾಂತ್ ಹುಟ್ಟು ಹಬ್ಬ. ರಜನೀಕಾಂತ್ ಇವತ್ತು 67 ನೇ ವಸಂತಕ್ಕೆ ಕಾಲಿಡುತ್ತಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ರಜನಿ ಒಂಥರಾ ಡಿಫರಂಟ್ ಸ್ಟಾರ್. ಮಾತಲ್ಲಿ ವಿಭಿನ್ನತೆ. ನಡೆಯೋ ಶೈಲಿಯಲ್ಲೂ ಭಿನ್ನ. ಒಪ್ಪಿಕೊಳ್ಳುವ ಸಿನಿಮಾಗಳೂ ಕೂಡಾ ಯುನಿಕ್. ಅದಕ್ಕೆ ಸಾಕ್ಷಿಗಳು ಹಲವು ಇವೆ. ಹೀಗೆ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಅವರ ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ರುದ್ರಾಕ್ಷಿಯ ಸಸಿಯನ್ನೂ ನೆಟ್ಟು ಜನ್ಮ ದಿನ ಆಚರಿಸುತ್ತಿದ್ದಾರೆ. ಹಿಮಾಚಲಪ್ರದೇಶದಿಂದ ತೆಗೆದುಕೊಂಡು ಬಂದ ಈ ಸಸಿಯನ್ನ ರಜನಿ ಮರ ಅಂತಲೇ ಕರೆಯುತ್ತಿದ್ದಾರೆ. ರಜನಿ ಹೆಸರಲ್ಲಿಯೇ ಒಂದಷ್ಟು ಸಸಿನೂ ನೆಡುತ್ತಿದ್ದಾರೆ. ಉಳಿದಂತೆ ರಜನಿಯ ಸ್ನೇಹಿತ ರಾಜಬಹದ್ದೂರ್ ಈ ಸಂಭ್ರಮದಲ್ಲಿ ಭಾಗಿಯಾಗಿ ಕೇಕ್ ಕಟ್ ಕೂಡ ಮಾಡಲಿದ್ದಾರೆ.
