ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಸೇರುವ ಬಗ್ಗೆ 6 ದಿನಗಳ ಕಾಲ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಇಂದು ನಡೆದ ಸಂವಾದದಲ್ಲಿ ವರನಟ ಡಾ.ರಾಜ್'ಕುಮಾರ್'ರನ್ನು ರಜನಿಕಾಂತ್ ಹಾಡಿ ಹೊಗಳಿದ್ದಾರೆ. ಡಾ.ರಾಜ್ ನನ್ನ ಪಾಲಿನ ಆದರ್ಶ. ರಾಜ್'ಕುಮಾರ್ ಓರ್ವ ಅದ್ಭುತ ನಟ ಎಂದು ತಲೈವಾ ಶ್ಲಾಘಿಸಿದ್ದಾರೆ.
ಚೆನ್ನೈ (ಡಿ.28): ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಸೇರುವ ಬಗ್ಗೆ 6 ದಿನಗಳ ಕಾಲ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಇಂದು ನಡೆದ ಸಂವಾದದಲ್ಲಿ ವರನಟ ಡಾ.ರಾಜ್'ಕುಮಾರ್'ರನ್ನು ರಜನಿಕಾಂತ್ ಹಾಡಿ ಹೊಗಳಿದ್ದಾರೆ. ಡಾ.ರಾಜ್ ನನ್ನ ಪಾಲಿನ ಆದರ್ಶ. ರಾಜ್'ಕುಮಾರ್ ಓರ್ವ ಅದ್ಭುತ ನಟ ಎಂದು ತಲೈವಾ ಶ್ಲಾಘಿಸಿದ್ದಾರೆ.
ಶಿವಾಜಿ ಗಣೇಶನ್, ಎಂಜಿಆರ್'ರಂತೆ ರಾಜ್ಕುಮಾರ್ ಕೂಡಾ ಮಹಾನ್ ನಟ. ಅಣ್ಣಾವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ನನ್ನ ಪುಣ್ಯ. ಕಾದು ಕಾದು ನಂತರ ಅವರು ಸಿಕ್ಕಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಾನು ಬೆಂಗಳೂರಿನಲ್ಲಿ ಇದ್ದಾಗ ರಾಜ್ಕುಮಾರ್ ಸಿನಿಮಾ ಇಷ್ಟಪಡುತ್ತಿದ್ದೆ ಎಂದು ಅಣ್ಣಾವ್ರನ್ನ ರಜನೀಕಾಂತ್ ಹಾಡಿ ಹೊಗಳಿದ್ದಾರೆ.
