ಹೆಸರಾಂತ ನಟ ಕಮಲ್  ಹಾಸನ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಚೆನ್ನೈ: ಹೆಸರಾಂತ ನಟ ಕಮಲ್ ಹಾಸನ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಕಡೇ ಪಕ್ಷ 2018ರವರೆಗೂ ಅವರು ರಾಜಕೀಯ ಪ್ರವೇಶಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ರಜನೀಕಾಂತ್ ಅವರ ನಟನೆಯ ಎರಡು ಸಿನಿಮಾಗಳು ತೆರೆ ಕಾಣಬೇಕಿದೆ. ಒಂದು ವೇಳೆ ಅವರು ಈಗಲೇ ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡಿದರೆ, ಆ ಸಿನಿಮಾಗಳ ಮೇಲೆ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಸೂಕ್ತ ಕಾರಣಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಇಳಿಯಲು ಚಿಂತಿಸಿದ್ದಾರೆ.

ಹೀಗಾಗಿ 2018ರವರೆಗೂ ಅವರು ರಾಜಕೀಯ ಪ್ರವೇಶ ಯೋಜನೆಯನ್ನು ಮುಂದೂಡಿದ್ದಾರೆ ಎಂದು ಸಿನಿಮಾರಂಗದಲ್ಲಿರುವ ಅವರ ಆಪ್ತ ಸ್ನೇಹಿತರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ, ರಾಜಕೀಯಕ್ಕೆ ಏಕೆ ಬರುತ್ತಿದ್ದೀರಿ ಎಂದು ಕೇಳಿದರೆ ತಮ್ಮ ಮೇಲೆ ಒತ್ತಡ ಇದೆ ಎಂದು ರಜನೀ ಹೇಳುತ್ತಿದ್ದಾರೆ. ಆದರೆ ಆ ಒತ್ತಡ ಕುಟುಂಬ ಅಥವಾ ಅಭಿಮಾನಿಗಳಿಂದ ಇಲ್ಲ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷವೊಂದರಿಂದ ಇದೆ ಎಂದು ರಜನೀ ಅವರನ್ನು ಭೇಟಿ ಮಾಡಿದ ಅಣ್ಣಾಡಿಎಂಕೆಯ ನಾಯಕರೊಬ್ಬರು ತಿಳಿಸಿದ್ದಾರೆ.