ರಾಜ್ಯದಲ್ಲಿ ಇನ್ನು ಏಳೆಂಟು ದಿನ ಮಳೆ ಸಾಧ್ಯತೆ

First Published 3, Jun 2018, 9:05 AM IST
Rain will continue in karnataka more than 8 days
Highlights

ರಾಜ್ಯದಲ್ಲಿ ಇನ್ನು ಏಳೆಂಟು ದಿನಗಳು ಮಳೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನಿರ್ದೇಶಕರು ಸುವರ್ಣ ನ್ಯೂಸ್’ಗೆ  ತಿಳಿಸಿದ್ದಾರೆ.  

ಬೆಂಗಳೂರು (ಜೂ. 03): ರಾಜ್ಯದಲ್ಲಿ ಇನ್ನು ಏಳೆಂಟು ದಿನಗಳು ಮಳೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನಿರ್ದೇಶಕರು ಸುವರ್ಣ ನ್ಯೂಸ್’ಗೆ  ತಿಳಿಸಿದ್ದಾರೆ.  

ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ  ಬೆಂಗಳೂರು, ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿಯಲ್ಲಿ ಭಾಗಗಳಲ್ಲಿ  ಏಳೆಂಟು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ. 

ಈಗಾಗಲೇ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಪ್ರವೇಶಿಸಿದೆ. 
 

loader