ಬೆಂಗಳೂರಿನಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಮಳೆಯು ಹಲವಾರು ಕಡೆ ಅನಾಹುತಗಳಿಗೆ ಕಾರಣವಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಮಳೆಯು ಹಲವಾರು ಕಡೆ ಅನಾಹುತಗಳಿಗೆ ಕಾರಣವಾಗಿದೆ.

ಚಂದ್ರಾಲೇಔಟ್​ನಲ್ಲಿ ಹಾಸ್ಟೆಲ್ ಗೋಡೆ ಕುಸಿದು 6 ಕಾರು, 2 ಆಟೋ, 8 ಬೈಕ್​ಗಳು ಜಖಂಗೊಂಡಿದೆ. ಸ್ಥಳಕ್ಕೆ ಕಾರ್ಪೊರೇಟರ್ ರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಜೆಪಿ ನಗರದ ಐದನೇ ಬ್ಲಾಕ್​ನಲ್ಲಿ ಮನೆ ಮೇಲೆಯೇ ಅಪಾರ್ಟ್​ಮೆಂಟ್​ ಗೋಡೆಯೊಂದು ಕುಸಿದ ಘಟನೆ ನಡೆದಿದೆ. ಶೋಭಾ ಡಿಪ್ಲೋರ್ ಅಪಾರ್ಟ್​ಮೆಂಟ್ ಗೋಡೆಯು ಮನೆ ಬಾಗಿಲ ಮೇಲೆ ಕುಸಿದಿದ್ದು, ಕುಟುಂಬದ ನಾಲ್ಕು ಸದಸ್ಯರು ಮನೆಯೊಳಗೇ ಬಂಧಿಯಾಗಿದ್ದಾರೆ.

ಜೆಪಿ ನಗರದ 2ನೇ ಬ್ಲಾಕ್​, ಕೋರಮಂಗಲ, ನಾಯಂಡಹಳ್ಳಿಗಳಲ್ಲಿ ಕೂಡಾ ಮನೆಗಳಿಗೆ ನೀರು ನುಗ್ಗಿದೆ. (ಸಾಂದರ್ಭಿಕ ಚಿತ್ರ)