ಮೊನ್ನೆ ತಡರಾತ್ರಿ 2 ಗಂಟೆಯಿಂದ ಸುರಿದ ದಾಖಲೆ ಮಳೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರದಲ್ಲೇ 13 ಸೆಂಟಿ ಮೀಟರ್ ಮಳೆಯಾಗಿದೆ. ನಿನ್ನೆ ರಾತ್ರಿ ಕೂಡ ಮತ್ತೆ ಅಲ್ಲಲ್ಲಿ ಮಳೆಯಾಗಿದ್ದು ನಿದ್ದೆಯಿಲ್ಲದೆ ಜನರು ಜಾಗರಣೆ ಮಾಡುವಂತಾಗಿದೆ.

ಬೆಂಗಳೂರು(ಆ.16): ಮೊನ್ನೆ ತಡರಾತ್ರಿ 2 ಗಂಟೆಯಿಂದ ಸುರಿದ ದಾಖಲೆ ಮಳೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರದಲ್ಲೇ 13 ಸೆಂಟಿ ಮೀಟರ್ ಮಳೆಯಾಗಿದೆ. ನಿನ್ನೆ ರಾತ್ರಿ ಕೂಡ ಮತ್ತೆ ಅಲ್ಲಲ್ಲಿ ಮಳೆಯಾಗಿದ್ದು ನಿದ್ದೆಯಿಲ್ಲದೆ ಜನರು ಜಾಗರಣೆ ಮಾಡುವಂತಾಗಿದೆ.

ಹೆಚ್'ಎಸ್'ಆರ್ ಲೇಔಟ್​, ಈಜಿಪುರದಲ್ಲಿ ತಡರಾತ್ರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದರು. ಮನೆಯ ಒಳಗಡೆ ನೀರು ನಿಂತಿದ್ದು ನೀರು ಹೊರ ಹಾಕುವಲ್ಲಿಯೆ ಜನರು ರಾತ್ರಿ ಕಳೆದು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ರು.

ತಡರಾತ್ರಿ ಸುರಿದ ಮಳೆಯಿಂದ ಕೋರಮಂಗಲದ ಎಸ್ ಡಿ ಬೆೇಡ್ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತ್ತು. ಅಪಾರ್ಟ್ ಮೆಂಟ್ ವೊಂದರ ಬೇಸ್ ಮೆಂಟ್ ನಲ್ಲಿ ನೀರು ಶೇಖರಣೆಗೊಂಡು ಬೈಕ್ ಗಳು ತೇಲಾಡುತ್ತಿದ್ದವು. ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸಟ್ಟರು.

ಇನ್ನೂ ಕೆಲ ದಿನ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆಯಿಂದ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ.