ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಈ ಬಾರಿ ಅರ್ಜಿ ಆಹ್ವಾನಿಸಿರುವ 88,000 ಹುದ್ದೆಗಳಿಗೆ ಆನ್‌ಲೈನ್‌ ನೇಮಕಾತಿ ನಡೆಸುವ ಮೂಲಕ 10 ಲಕ್ಷ ಮರಗಳನ್ನು ಉಳಿಸಲಿದೆ. ರೈಲ್ವೆ ಈ ಬಾರಿ ನಡೆಸುತ್ತಿರುವ ವಿಶ್ವದ ಅತಿ ದೊಡ್ಡ ನೇಮಕಾತಿಗೆ 2.37ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಈ ನೇಮಕಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಪೂರ್ಣಗೊಳಿಸಲಾಗುತ್ತಿದೆ. ಒಂದು ವೇಳೆ ಇದನ್ನು ಆನ್‌ಲೈನ್‌ನಲ್ಲಿ ಮಾಡದೇ ಇದ್ದಲ್ಲಿ ವಿವಿಧ ಪ್ರಕ್ರಿಯೆಗಳಿಗೆ ಸುಮಾರು 7.5 ಕೋಟಿ ಕಾಗದದ ಹಾಳೆ ಬೇಕಾಗುತ್ತಿತ್ತು. ಇದು 10 ಲಕ್ಷ ಮರಗಳಿಗೆ ಸರಿಸಮವಾಗಿದೆ. ಇಲ್ಲಿಯವರೆಗಿನ ನೇಮಕಾತಿ ಪ್ರಕ್ರಿಯೆಯಲ್ಲಿ ಒಬ್ಬ ಅಭ್ಯರ್ಥಿ ಪರೀಕ್ಷೆ ಬರೆಯಲು 4-5 ಶೀಟ್‌ ಪೇಪರ್‌ ಬಳಕೆಯಾಗುತ್ತಿತ್ತು.