ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳಿಗೆ ವಿದೇಶ ಪ್ರವಾಸ ಭಾಗ್ಯ ಸಿಗುತ್ತದೆ. ಆದರೆ ಭಾರತೀಯ ರೈಲ್ವೆ, ಇದೇ ಮೊದಲ ಬಾರಿಗೆ ತನ್ನ ಅತ್ಯಂತ ಕೆಳಹಂತದ ಸಿಬ್ಬಂದಿಯನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಮುಂದಾಗಿದೆ.
ನವದೆಹಲಿ (ಡಿ.18): ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳಿಗೆ ವಿದೇಶ ಪ್ರವಾಸ ಭಾಗ್ಯ ಸಿಗುತ್ತದೆ. ಆದರೆ ಭಾರತೀಯ ರೈಲ್ವೆ, ಇದೇ ಮೊದಲ ಬಾರಿಗೆ ತನ್ನ ಅತ್ಯಂತ ಕೆಳಹಂತದ ಸಿಬ್ಬಂದಿಯನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಮುಂದಾಗಿದೆ.
ಸಿಕಂದರಾಬಾದ್’ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯವು, ಇತ್ತೀಚೆಗೆ ಎಲ್ಲಾ ಕಚೇರಿಗಳಿಗೆ ಸುತ್ತೋಲೆ ರವಾನಿಸಿದೆ. ಅದರನ್ವಯ, ಮನರಂಜನೆಯ ಉದ್ದೇಶದಿಂದ ನಾನ್ ಗೆಜೆಟೆಡ್ ವರ್ಗದ ಸಿಬ್ಬಂದಿಗಳನ್ನು ಸಿಂಗಾಪುರ ಮತ್ತು ಮಲೇಷ್ಯಾಕ್ಕೆ 6 ದಿನ ಕಾಲ ಪ್ರವಾಸಕ್ಕೆ ಕರೆದೊಯ್ಯುವ ಪ್ರಸ್ತಾಪ ಮಾಡಲಾಗಿದೆ.
ತಲಾ 60,000 ರು. ವೆಚ್ಚದ ಪ್ರವಾಸಕ್ಕೆ, ಸಿಬ್ಬಂದಿ ಶೇ.25ರಷ್ಟು ಅಂದರೆ 15000 ರು. ಪಾವತಿಸಬೇಕು. ಉಳಿದ 45,000 ರು. ರಷ್ಟು ಹಣವನ್ನು ರೈಲ್ವೆ ಸಿಬ್ಬಂದಿ ಕಲ್ಯಾಣ ನಿಧಿಯಿಂದ ಪಾವತಿ ಮಾಡಲಾಗುವುದು.
ನಿವೃತ್ತಿ ಹಂತದಲ್ಲಿರುವ ಸಿಬ್ಬಂದಿ ಮತ್ತು ಕಡಿಮೆ ವೇತನ ಹೊಂದಿರುವ ಗ್ಯಾಂಗ್ಮನ್, ಟ್ರ್ಯಾಕ್ಮನ್ ಹುದ್ದೆಯಲ್ಲಿರುವ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲಾಗುವುದು.
