ನವದೆಹಲಿ[ಜೂ.20]: ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಹಾಗೂ ಪ್ರವಾಸಿ ಸ್ಥಳಗಳನ್ನು ಸಂಪರ್ಕಿ ಸುವ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸುವ ಅವಕಾಶ ಖಾಸಗಿ ಕಂಪನಿಗಳಿಗೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ಈ ಬಗ್ಗೆ 100 ದಿನಗಳಲ್ಲಿ ಟೆಂಡರ್ ಆಹ್ವಾನಕ್ಕೆ ಸಿದ್ಧತೆ ಆರಂಭಿಸಿದೆ. ಆರಂಭಿಕ ಹಂತವಾಗಿ 2 ರೈಲುಗಳನ್ನು ತನ್ನ ಟಿಕೆಟ್ ಬುಕಿಂಗ್ ಹಾಗೂ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಗೆ ರೈಲ್ವೆ ಹಸ್ತಾಂತರ ಮಾಡಲಿದೆ. ಟಿಕೆಟ್ ವಿತರಣೆ, ರೈಲಿನೊಳಗಿನ ಸೇವೆ ಎಲ್ಲವನ್ನೂ ಐಆರ್‌ಸಿಟಿಸಿ ನೋಡಿಕೊಳ್ಳಲಿದ್ದು, ರೈಲ್ವೆ ಇಲಾಖೆಗೆ ಇಂತಿಷ್ಟು ಹಣ ಎಂದು ಪಾವತಿ ಮಾಡಲಿದೆ. ಪ್ರ

ಯಾಣಿಕರ ದಟ್ಟಣೆ ಕಡಿಮೆ ಇರುವ ಹಾಗೂ ಮಹತ್ವದ ಪ್ರವಾಸಿ ಸ್ಥಳಗಳನ್ನು ಹೊಂದಿರುವ ನಗರಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ಈ ಕ್ರಮ ಖಾಸಗಿಕರಣದ ಯತ್ನ ಎಂಬ ಭಾವನೆ ನೌಕರರಲ್ಲಿ ಮೂಡಿಸುವ ಸಾಧ್ಯತೆಯಿದೆ. ಹೀಗಾಗಿ ಈ ನಿರ್ಧಾರದ ಜಾರಿ ಮುನ್ನ ಕಾರ್ಮಿಕ ಸಂಘಟ ನೆಗಳನ್ನು ಸಂಪರ್ಕಿಸಲು ರೈಲ್ವೆ ಉದ್ದೇಶಿಸಿದೆ.

ಗ್ಯಾಸ್ ರೀತಿ ರೈಲ್ವೆ ಟಿಕೆಟ್ ಸಬ್ಸಿಡಿ ತ್ಯಜಿಸಲು ಅವಕಾಶ

ರೈಲ್ವೆ ಟಿಕೆಟ್ ಸಬ್ಸಿಡಿಯನ್ನು ಸ್ವಯಂ ತ್ಯಜಿಸುವಂತೆ ಪ್ರಯಾಣಿಕರ ಮನವೊಲಿಸಲು ರೈಲ್ವೆ ಇಲಾಖೆ ಬೃಹತ್ ಆಂದೋಲನವೊಂದನ್ನು ನಡೆಸಲು ಉದ್ದೇಶಿಸಿದೆ. ಇದಕ್ಕಾಗಿ ಟಿಕೆಟ್ ಖರೀದಿಸುವಾಗಲೇ ಸಬ್ಸಿಡಿಸಹಿತ ಹಾಗೂ ಸಬ್ಸಿಡಿ ರಹಿತ ಟಿಕೆಟ್ ಎಂಬ ಆಯ್ಕೆನೀಡಲಾಗುತ್ತದೆ. ಅಡುಗೆ ಅನಿಲ ಸಬ್ಸಿಡಿ ತ್ಯಜಿಸುವವರಿ ಗಾಗಿ ಕೇಂದ್ರ ಜಾರಿ ಮಾಡಿದ್ದ ಉಜ್ವಲ ಎಂಬ ಯೋಜನೆ ಯಶಸ್ವಿ ಆಗಿತ್ತು. ಅದೇ ರೀತಿ ಟಿಕೆಟ್ ಸಬ್ಸಿಡಿ ತ್ಯಜಿಸುವ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ.