ಭಾರತೀಯ ರೈಲ್ವೆ ಇಲಾಖೆ ಬಗ್ಗೆ ನೀವೀಗ ಹೆಮ್ಮೆ ಪಡುವ ವಿಚಾರ ಒಂದು ಇಲ್ಲಿದೆ.  ನೀವು ಜನ್ ಭಾಗಿದಾರಿ ಕಾರ್ಯಕ್ರಮದಲ್ಲಿ ಭಾಗಿಯಾದಲ್ಲಿ ನಿಮಗೆ 10 ಲಕ್ಷ ಬಹುಮಾನ ಮೊತ್ತ ಸಿಗಲಿದೆ.

ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಬಗ್ಗೆ ನೀವೀಗ ಹೆಮ್ಮೆ ಪಡುವ ವಿಚಾರ ಒಂದು ಇಲ್ಲಿದೆ. ನೀವು ಜನ್ ಭಾಗಿದಾರಿ ಕಾರ್ಯಕ್ರಮದಲ್ಲಿ ಭಾಗಿಯಾದಲ್ಲಿ ನಿಮಗೆ 10 ಲಕ್ಷ ಬಹುಮಾನ ಮೊತ್ತ ಸಿಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಇದೀಗ ಒಂದು ಹೊಸ ಸ್ಪರ್ಧೆಯೊಂದನ್ನು ನೀಡಿದೆ. ಈ ಸ್ಪರ್ಧೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ. ಜನರಿಗೆ ಉತ್ತಮ ಸೇವೆಯನ್ನು ಒದಗಿಸಲು ರೈಲ್ವೆ ಇಲಾಖೆಯು ಹೆಚ್ಚು ಹಣವನ್ನು ಗಳಿಕೆ ಮಾಡುವುದು ಹೇಗೆ ಎಂದು ಪ್ರಶ್ನೆ ಕೇಳಲಾಗಿದೆ.

ಜನ ಭಾಗಿದಾರಿ ಕಾರ್ಯಕ್ರಮದ ಮೂಲಕ ಜನರು ಇಲ್ಲಿ ತಮ್ಮ ಐಡಿಯಾಗಳನ್ನು ರೈಲ್ವೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಜನರು ತಮ್ಮ ಐಡಿಯಾಗಳನ್ನು ಹಂಚಿಕೊಂಡಿದ್ದಕ್ಕೆ ರೈಲ್ವೆ ಇಲಾಖೆ 10 ಲಕ್ಷದವರೆಗೂ ಬಹುಮಾನವನ್ನು ನೀಡುತ್ತಿದೆ. ಸೂಕ್ತ ಉತ್ತರಕ್ಕೆ ರೈಲ್ವೆ ಇಲಾಖೆ 10 ಲಕ್ಷ ಬಹುಮಾನವನ್ನು ನೀಡುತ್ತದೆ.

ಆನ್ ಲೈನ್ ಮೂಲಕ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮೈ ಗವರ್ನಮೆಂಟ್ App ನಲ್ಲಿ ನಿಮ್ಮ ಐಡಿಯಾಗಳನ್ನು ನೀಡಬಹುದಾಗಿದೆ.