ಈ ಗುರಿ ತಲುಪಲು ನಾವು ಹೆಚ್ಚಿಗೆ ಸಮಯ ಕೆಲಸ ಮಾಡಬೇಕಾಗುತ್ತಿದೆ ಎಂದು ಓರ್ವ ಟಿಟಿ ತನ್ನ ಗೋಳು ತೋಡಿಕೊಂಡರೆ, ಮತ್ತೋರ್ವ ಟಿಟಿ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಆತಂಕ ತೋಡಿಕೊಂಡಿದ್ದಾರೆ.
ನವದೆಹಲಿ(ಅ.10): ಖಾಸಗಿ ಕಂಪನಿಗಳಲ್ಲಿ ನೌಕರರಿಗೆ ಮಾಸಿಕ ಇಂತಿಷ್ಟು ಗುರಿ ನಿಗದಿಪಡಿಸುವುದು ಮಾಮೂಲಿ. ಆದರೆ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಸಿಬ್ಬಂದಿಗೂ ಪಶ್ಚಿಮ ರೈಲ್ವೆ ದಂಡ ವಸೂಲಿ ಗುರಿ ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರತಿ ರೈಲಿನಿಂದ 6ರಿಂದ 8 ಸಾವಿರ ರುಪಾಯಿ ದಂಡವನ್ನು ಪ್ರತಿನಿತ್ಯ ಸಂಗ್ರಹಿಸಬೇಕು ಎಂದು ಪಶ್ಚಿಮ ರೈಲ್ವೆ ಸೂಚಿಸಿದೆ ಎಂದು ಆಪಾದಿಸಿರುವ ಟಿಕೆಟ್ ತಪಾಸಣೆ ಸಿಬ್ಬಂದಿ, ಈ ಗುರಿಯನ್ನು ತಲುಪಲು ವಿಫಲವಾದರೆ ಮೇಲಧಿಕಾರಿಗಳು ನಿಂದಿಸುತ್ತಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.
ಈ ಗುರಿ ತಲುಪಲು ನಾವು ಹೆಚ್ಚಿಗೆ ಸಮಯ ಕೆಲಸ ಮಾಡಬೇಕಾಗುತ್ತಿದೆ ಎಂದು ಓರ್ವ ಟಿಟಿ ತನ್ನ ಗೋಳು ತೋಡಿಕೊಂಡರೆ, ಮತ್ತೋರ್ವ ಟಿಟಿ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಆತಂಕ ತೋಡಿಕೊಂಡಿದ್ದಾರೆ.