ಪ್ರಯಾಣಿಕನೊಬ್ಬ ರೈಲಿನ ಬಗ್ಗೆ  ಮಾಹಿತಿ ಕೇಳಿದ್ದಕ್ಕೆ ರೈಲ್ವೆ  ಸಿಬ್ಬಂದಿ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿ ಪೆನ್ನಿನಿಂದ ಚುಚ್ಚಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣಲದಲ್ಲಿ ನಡೆದಿದೆ. ಘಟನೆಯಲ್ಲಿ 54 ವರ್ಷದ ನಾರಾಯಣಸ್ವಾಮಿಗೆ ಎಡಗೈಗೆ ಗಾಯಗೊಂಡಿದ್ದು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬೆಂಗಳೂರು(ಅ.09): ಪ್ರಯಾಣಿಕನೊಬ್ಬ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ರೈಲ್ವೆ ಸಿಬ್ಬಂದಿ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿ ಪೆನ್ನಿನಿಂದ ಚುಚ್ಚಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣಲದಲ್ಲಿ ನಡೆದಿದೆ. ಘಟನೆಯಲ್ಲಿ 54 ವರ್ಷದ ನಾರಾಯಣಸ್ವಾಮಿಗೆ ಎಡಗೈಗೆ ಗಾಯಗೊಂಡಿದ್ದು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಜೀವನ್ ಭೀಮಾನಗರ ನಿವಾಸಿ ನಾರಾಯಣ ಸ್ವಾಮಿ ಎಂಬುವವರು ಮೈಸೂರಿಗೆ ಹೋಗಲು ಬೆಳಗ್ಗೆ ಸಿಟಿ ರೈಲ್ವೇ ಸ್ಟೇಷನ್​'ಗೆ ಬಂದಿದ್ದರು. ಟಿಕೇಟ್ ತೆಗೆದುಕೊಂಡು ಬಂದು ಕೌಂಟರ್​​​​​'ನಲ್ಲಿದ್ದ ರಿಜಿಸ್ಟರೇಷನ್ ಮತ್ತು ಕ್ಯಾನ್ಸಲೇಷನ್ ಕೌಂಟರ್ ಸುಬ್ಬಯ್ಯ ಎಂಬುವವರ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ರೈಲ್ವೇ ವಿಚಾರಣೆ ಕೌಂಟರ್ ನಲ್ಲಿದ್ದ ಸುಬ್ಬಯ್ಯ ಎಂಬಾತ ನಾರಾಯಣ ಸ್ವಾಮಿಯವರಿಗೆ ಪೆನ್ನಿನಿಂದ ಚುಚ್ಚಿದ್ದಾನೆ. ರೈಲ್ವೇ ಸ್ಟೇಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು