Asianet Suvarna News Asianet Suvarna News

ಕನ್ನಡದಲ್ಲಿಯೂ ಬರೆಯಬಹುದು ರೈಲ್ವೆ ಪರೀಕ್ಷೆ

ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿರುವ ಭಾರತೀಯ ರೈಲ್ವೆ ಇಲಾಖೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಈ ಮೂಲಕ ಹಲವು ವರ್ಷಗಳ ಕನ್ನಡಿಗರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಗ್ರೂಪ್ ಸಿ ಲೆವಲ್ 1 ಮತ್ತು ಗ್ರೂಪ್ ಸಿ ಲೆವಲ್ 2 ದರ್ಜೆಯ ಹುದ್ದೆಗಳಿಗೆ ಇನ್ನುಮುಂದೆ ಕನ್ನಡಿಗರು ಕನ್ನಡದಲ್ಲೇ ಪರೀಕ್ಷೆ ಎದುರಿಸಬಹುದು.

Railway exam to be held in Kannada

ಬೆಂಗಳೂರು : ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿರುವ ಭಾರತೀಯ ರೈಲ್ವೆ ಇಲಾಖೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಈ ಮೂಲಕ ಹಲವು ವರ್ಷಗಳ ಕನ್ನಡಿಗರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಗ್ರೂಪ್ ಸಿ ಲೆವಲ್ 1 ಮತ್ತು ಗ್ರೂಪ್ ಸಿ ಲೆವಲ್ 2 ದರ್ಜೆಯ ಹುದ್ದೆಗಳಿಗೆ ಇನ್ನುಮುಂದೆ ಕನ್ನಡಿಗರು ಕನ್ನಡದಲ್ಲೇ ಪರೀಕ್ಷೆ ಎದುರಿಸಬಹುದು.

ಆದರೆ, ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಸಹಿ ಮಾಡಬೇಕು ಎಂಬ ಅಧಿಸೂಚನೆಯನ್ನು ಮಾತ್ರ ರೈಲ್ವೆ ಇಲಾಖೆ ರದ್ದುಪಡಿಸಿಲ್ಲ. ಇಲಾಖೆಯಲ್ಲಿ ಖಾಲಿ ಇರುವ 89409 ಸಿ ದರ್ಜೆ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದ ಭಾರತೀಯ ರೈಲ್ವೆ ಇಲಾಖೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯುವಂತೆ ನಿಯಮ ಹೊರಡಿಸಿತ್ತು. ರೈಲ್ವೆ ಇಲಾಖೆಯ ಈ ಆದೇಶಕ್ಕೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಇದರಿಂದ ಎಚ್ಚೆತ್ತುಕೊಂಡ ಇಲಾಖೆ ಕನ್ನಡವೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿದೆ. ಅಸಿಸ್ಟೆಂಟ್ ಲೊಕೋ ಪೈಲಟ್, ಟೆಕ್ನಿಷಿಯನ್ಸ್ (ಫಿಟ್ಟರ್, ಕ್ರೇನ್ ಡ್ರೈವರ್) ಟ್ರ್ಯಾಕ್ ಮೆಂಟೇನರ್ಸ್, ಪಾಯಿಂಟ್ಸ್ ಮೆನ್ ಹೆಲ್ಪರ್, ಗೇಟ್‌ಮ್ಯಾನ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಹತ್ತನೇ ತರಗತಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಪಡೆದವರು ಅರ್ಜಿ ಸಲ್ಲಿಸಬಹುದು.

Follow Us:
Download App:
  • android
  • ios