ಇದೇ ಮೊದಲ ಬಾರಿಗೆ ಕೇಂದ್ರ ಹಾಗೂ ರೈಲ್ವೇ ಬಜೆಟ್-2017 ಒಟ್ಟಿಗೆ ಮಂಡನೆಯಾಗುತ್ತಿರುವುದು ಐತಿಹಾಸಿಕವಾಗಿದ್ದು, ನಾಳೆ ನಡೆಯಲಿರುವ ಬಜೆಟ್ ಅಧಿವೇಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ನವದೆಹಲಿ (ಜ.31): ಇದೇ ಮೊದಲ ಬಾರಿಗೆ ಕೇಂದ್ರ ಹಾಗೂ ರೈಲ್ವೇ ಬಜೆಟ್-2017 ಒಟ್ಟಿಗೆ ಮಂಡನೆಯಾಗುತ್ತಿರುವುದು ಐತಿಹಾಸಿಕವಾಗಿದ್ದು, ನಾಳೆ ನಡೆಯಲಿರುವ ಬಜೆಟ್ ಅಧಿವೇಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರೈಲು ಹಳಿ ತಪ್ಪಿ ಸಾಕಷ್ಟು ದುರಂತಗಳು ಸಂಭವಿಸಿದೆ. ಕಾನ್ಪುರ ರೈಲು ಅಪಘಾತವೊಂದರಲ್ಲೇ 150 ಮಂದಿ ಸಾವನ್ನಪ್ಪಿದ್ದಾರೆ. ಈ ಬಾರಿ ರೈಲ್ವೇ ಬಜೆಟಲ್ಲಿ ಸುರಕ್ಷಾ ತೆರಿಗೆಯನ್ನು ಪರಿಚಯಿಸಬಹುದೆಂಬ ನಿರೀಕ್ಷೆಯಿದ್ದು ರಾಷ್ಟ್ರೀಯ ರೈಲು ಸಂರಕ್ಷಾ ಕೋಶಕ್ಕೆ 1.2 ಲಕ್ಷ ಕೋಟಿ ಮೊತ್ತವನ್ನು ಮಂಜೂರು ಮಾಡುವ ನಿರೀಕ್ಷೆಯಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 1.84 ಲಕ್ಷ ಕೋಟಿ ಆದಾಯ ನಿರೀಕ್ಷಿಸಲಾಗಿದೆ.