ಈ ರೈಲು (06541) ಡಿ.22ರಿಂದ 2017ರ ಜ.19ರವರೆಗೆ ಪ್ರತಿ ಗುರುವಾರ ಸಂಜೆ 6 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಶುಕ್ರವಾರ ಬೆಳಗ್ಗೆ 11.35ಕ್ಕೆ ಪಂಢರಾಪುರ ನಿಲ್ದಾಣ ತಲುಪಲಿದೆ.

ಹುಬ್ಬಳ್ಳಿ(ನ.20): ಮುಂಬರುವ ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಯಶವಂತಪುರ ಮತ್ತು ಪಂಢರಾಪುರ ಮಧ್ಯೆ ವೀಕ್ಲಿ ತತ್ಕಾಲ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ. ಈ ರೈಲು (06541) ಡಿ.22ರಿಂದ 2017ರ ಜ.19ರವರೆಗೆ ಪ್ರತಿ ಗುರುವಾರ ಸಂಜೆ 6 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಶುಕ್ರವಾರ ಬೆಳಗ್ಗೆ 11.35ಕ್ಕೆ ಪಂಢರಾಪುರ ನಿಲ್ದಾಣ ತಲುಪಲಿದೆ. ಪಂಢರಾಪುರ-ಯಶವಂತಪುರ ತತ್ಕಾಲ್ ಸ್ಪೆಷಲ್ ಎಕ್ಸಪ್ರೆಸ್ ರೈಲು (06542) ಡಿ.23ರಿಂದ 2017ರ ಜ.20ರ ವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1.35ಕ್ಕೆ ಪಂಢರಾಪುರ ನಿಲ್ದಾಣದಿಂದ ಹೊರಟು ಶನಿವಾರ ಬೆಳಗ್ಗೆ 6.20ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.