ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದರಿಂದ ಎಂಜಿನ್ ಬರುತ್ತಿರುವುದು ಅರಿವಿಗೆ ಬಂದಿರಲಿಲ್ಲ ಎನ್ನಲಾಗಿದೆ.

ಹಾಸನ(ಫೆ.08): ರೈಲ್ವೆ ಗೇಟ್ ಇಲ್ಲದ ಸ್ಥಳದಲ್ಲಿ ಹಳಿ ದಾಟುತ್ತಿದ್ದಾಗ ರೈಲ್ವೆ ಎಂಜಿನ್‌'ವೊಂದಕ್ಕೆ ಸ್ಕಾರ್ಪಿಯೊ ಕಾರೊಂದು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಬಾಗೇಶಪುರ ಸಮೀಪದ ಸಿದ್ದಾಪುರ ಗೇಟ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ದುದ್ದ ಗ್ರಾಮದ ಬಿಕಾಂ ವಿದ್ಯಾರ್ಥಿ ಆನಂದ್ (22) ಮತ್ತು ಟ್ಯಾಂಕರ್ ಚಾಲಕ ರಾಘವೇಂದ್ರ(28) ಮೃತರು. ಇವರು ಕಟ್ಟೆಪುರ ಗ್ರಾಮದಲ್ಲಿ ನಡೆದ ಗ್ರಾಮದ ದೇವರ ಹಬ್ಬ ಮುಗಿಸಿಕೊಂಡು ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದರಿಂದ ಎಂಜಿನ್ ಬರುತ್ತಿರುವುದು ಅರಿವಿಗೆ ಬಂದಿರಲಿಲ್ಲ ಎನ್ನಲಾಗಿದೆ.

ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.