ದಕ್ಷಿಣ ಮಧ್ಯ ರೈಲ್ವೆಯ 10 ನಿಲ್ದಾಣಗಳು ಶೇ.100 ಡಿಜಿಪೇ(ಡಿಜಿಟಲ್‌) ರೈಲು ನಿಲ್ದಾಣಗಳಾಗಿ ಪರಿವರ್ತಿತವಾಗುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ವಿನೋದ ಕುಮಾರ್‌ ಯಾದವ್‌ ಅವರ ಪರಿಕಲ್ಪನೆ ಹಾಗೂ ಪರಿಶ್ರಮದಿಂದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶದ ರೈಲು ನಿಲ್ದಾಣಗಳು ಈ ಸೌಲಭ್ಯ ವನ್ನು ಪಡೆಯುತ್ತಿವೆ.

ರಾಯಚೂರು(ಮಾ.26): ದೇಶದ ಎಲ್ಲಾ ರೈಲು ನಿಲ್ದಾಣಗಳೂ ಹಂತಹಂತವಾಗಿ ಕ್ಯಾಶ್‌ಲೆಸ್‌ ವ್ಯವಸ್ಥೆಗೊಳಪಡಲಿದ್ದು ಈ ನಿಟ್ಟಿನಲ್ಲಿ ಸಂಪೂರ್ಣ ಸಿದ್ಧವಾಗಿರುವ ರಾಯ​ಚೂರು ರಾಜ್ಯದ ಮೊದಲ ಕ್ಯಾಶ್‌ಲೆಸ್‌ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇನ್ನುಮುಂದೆ ಇಲ್ಲಿ ಟಿಕೆಟ್‌ನಿಂದ ಹಿಡಿದು ಆಹಾರ ಪದಾರ್ಥ, ಪಾರ್ಸಲ್‌ ಬುಕಿಂಗ್‌, ಪಾರ್ಕಿಂಗ್‌ ಶುಲ್ಕದವರೆಗೆ ಎಲ್ಲವನ್ನೂ ಡಿಜಿಪೇ (ಡಿಜಿಟಲ್‌ ಪಾವತಿ) ಮೂಲಕವೇ ಪಾವತಿಸಬ​ಹುದು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿರುವ ದಕ್ಷಿಣ ಮಧ್ಯ ರೈಲ್ವೆ ಗುಂತಕಲ್‌ ವಿಭಾಗದ ಎಡಿಆರ್‌ಎಂ ಕೆ.ವಿ. ಸುಬ್ಬರಾಯುಡು, ಕೇಂದ್ರ ಸರ್ಕಾರದ ಕ್ಯಾಶ್‌ಲೆಸ್‌ ಆಡಳಿತದಲ್ಲಿ ರೈಲ್ವೆ ಸಚಿವ ಸುರೇಶ ಪ್ರಭು ಅವರು ದೇಶದ 25 ರೈಲು ನಿಲ್ದಾಣಗಳಲ್ಲಿ ಶೇ.100 ಡಿಜಿಪೇ ವ್ಯವಸ್ಥೆಯನ್ನು ಅಳವಡಿಸಿ ಚಾಲನೆ ನೀಡಿದ್ದು, ರಾಯ​ಚೂರಿ​ನಲ್ಲಿ ಸಾಂಕೇತಿಕವಾಗಿ ಚಾಲನೆ ಕೊಡಲಾಗಿದೆ ಎಂದರು.

ದಕ್ಷಿಣ ಮಧ್ಯ ರೈಲ್ವೆಯ 10 ನಿಲ್ದಾಣಗಳು ಶೇ.100 ಡಿಜಿಪೇ(ಡಿಜಿಟಲ್‌) ರೈಲು ನಿಲ್ದಾಣಗಳಾಗಿ ಪರಿವರ್ತಿತವಾಗುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ವಿನೋದ ಕುಮಾರ್‌ ಯಾದವ್‌ ಅವರ ಪರಿಕಲ್ಪನೆ ಹಾಗೂ ಪರಿಶ್ರಮದಿಂದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶದ ರೈಲು ನಿಲ್ದಾಣಗಳು ಈ ಸೌಲಭ್ಯ ವನ್ನು ಪಡೆಯುತ್ತಿವೆ. ದಕ್ಷಿಣ ಮಧ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಾಲೋಚನೆ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿ ದರು. ಗುಂತಕಲ್‌ ವಿಭಾಗದ ಕರ್ನಾ ಟಕ ದಲ್ಲಿ ರಾಯಚೂರಿನಿಂದ ಪ್ರತಿ ವರ್ಷ 28 ಕೋಟಿ ರು. ವ್ಯವಹಾರ ಬರುತ್ತಿದ್ದು, ಇದನ್ನು ಎ ಗ್ರೇಡ್‌ ನಿಲ್ದಾಣ ವನ್ನಾಗಿ ಪರಿಗಣಿಸಿ ಡಿಜಿಪೇ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರು ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಇಲ್ಲವೇ ಪೇಟಿಎಂ ಮೂಲಕ ರೈಲು ನಿಲ್ದಾಣದಲ್ಲಿರುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.