ಪ್ರಧಾನಿ ಜನರಿಗಾಗಿ ಏನು ಮಾಡಿದ್ದಾರೆಂದು ಅವರು ಹೋದಲೆಲ್ಲಾ ಕೇಳುತ್ತಿದ್ದಾರೆ, ನಾವು ಮಾತನಾಡುವ ಪ್ರಧಾನಿಯನ್ನು ನೀಡಿದ್ದೇವೆ ಎಂಬುವುದನ್ನು ಅವರು ತಿಳಿದುಕೊಳ್ಳಬೇಕು, ಎಂದು ಶಾ ಕಿಡಿಕಾರಿದ್ದಾರೆ.
ಚಂಢೀಗಡ (ನ.20): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಕಣ್ಣಿಗೆ ಇಟಾಲಿಯನ್ ಕನ್ನಡಕ ಹಾಕಿಕೊಂಡಿರುವುದರಿಂದದ ಅವರಿಗೆ ದೇಶದಲ್ಲಾದ ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲವೆಂದು ಶಾ ವ್ಯಂಗ್ಯವಾಡಿದ್ದಾರೆ.
ರಾಹುಲ್ ಬಾಬಾ ಇನ್ನೂ ಅಪ್ರಬುದ್ಧರಾಗಿದ್ದಾರೆ, ಆದುದರಿಂದ ಅವರು ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಿದ್ದಾರೆ. ಕಣ್ಣಿಗೆ ಇಟಾಲಿಯನ್ ಕನ್ನಡಕ ಹಾಕಿಕೊಂಡಿರುವುದರಿಂದ ಅವರಿಗೆ ಮೋದಿಯವರ ಆಡಳಿತದಲ್ಲಾಗಿರುವ ಯಾವುದೇ ಅಭಿವೃದ್ಧಿ ಕಾಣುವುದಿಲ್ಲ, ಎಂದು ಚಂಢೀಗಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.
ಪ್ರಧಾನಿ ಜನರಿಗಾಗಿ ಏನು ಮಾಡಿದ್ದಾರೆಂದು ಅವರು ಹೋದಲೆಲ್ಲಾ ಕೇಳುತ್ತಿದ್ದಾರೆ, ನಾವು ಮಾತನಾಡುವ ಪ್ರಧಾನಿಯನ್ನು ನೀಡಿದ್ದೇವೆ ಎಂಬುವುದನ್ನು ಅವರು ತಿಳಿದುಕೊಳ್ಳಬೇಕು, ಎಂದು ಶಾ ಕಿಡಿಕಾರಿದ್ದಾರೆ.
ಸರ್ಕಾರ ಏನು ಮಾಡಿದೆ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ, ನಮ್ಮ ಸರ್ಕಾರ ಉತ್ತಮ ಪಾರದರ್ಶಕ ಆಡಳಿತ ಕೊಟ್ಟಿದೆ, ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಿವಧಿಯಲ್ಲಿ ಏನು ಮಾಡಿದೆಯೆಂಬುವುದನ್ನು ರಾಹುಲ್ ತಿಳಿಸಬೇಕು, ಎಂದು ಅಮಿತ್ ಶಾ ಪ್ರತಿ ಸವಾಲೆಸೆದಿದ್ದಾರೆ.