ಕಾಂಗ್ರೆಸ್ ಉಪಾಧ್ಯಕ್ಷರು ಪಕ್ಷ ಮುನ್ನಡೆಸೋ ಕಾಲ ಬಂದಿದೆಸಂದರ್ಶನದಲ್ಲಿ ಸ್ವತಃ ರಾಹುಲ್ ಆಪ್ತ ಸಚಿನ್ ಪೈಲಟ್ ಹೇಳಿಕೆ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದೀಪಾವಳಿ ಮುಗಿದ ನಂತರ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂದು ರಾಹುಲ್ ಆಪ್ತರೂ ಆಗಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್ ವೇಳೆ ರಾಹುಲ್ ಪಟ್ಟಾಭಿಷೇಕ ನಡೆಯಬಹುದು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಪೈಲಟ್ ಅವರ ಈ ಹೇಳಿಕೆ ಬಂದಿದೆ. ‘ಪಕ್ಷದ ಉಪಾಧ್ಯಕ್ಷರು ಈಗ ಪಕ್ಷವನ್ನು ಮುನ್ನಡೆಸುವ ಕಾಲ ಬಂದಿದೆ’ ಎಂದು ಪೈಲಟ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪಕ್ಷದ ಸಂಘಟನಾತ್ಮಕ ಚುನಾವಣೆಗಳು ಈಗ ಪ್ರಗತಿಯಲ್ಲಿವೆ. ಬಳಿಕ ದೀಪಾವಳಿ ನಂತರ (ಅಕ್ಟೋಬರ್ 3ನೇ ವಾರ) ಪಕ್ಷದ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳ ಬಹುದು. ಬಹಳ ದಿನದಿಂದ ಇದು ನೆರವೇರುವುದು ಬಾಕಿ ಇದೆ’ ಎಂದು ಅವರು ಹೇಳಿದರು. ಗಾಂಧಿ ಎಂಬ ಅಡ್ಡಹೆಸರು ಪದೋನ್ನತಿಗೆ ಅರ್ಹತೆ ಎನ್ನಿಸಿಕೊಳ್ಳದು. ಸಾಧನೆಯೇ ಈ ಸ್ಥಾನಕ್ಕೇರಲು ಅರ್ಹತೆ ಎಂದು ಅವರು ಸ್ಪಷ್ಟಪಡಿಸಿದರು.