ಈ ಹಿನ್ನೆಲೆಯಲ್ಲಿ 16 ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೇ ಖುದ್ದು ಈ ಘಟನೆ ಖಂಡಿಸಿ, ‘ಇಂಥ ವಿವೇಚನೆ ಇಲ್ಲದ, ಸ್ವೀಕಾರಾರ್ಹವಲ್ಲದ, ಕ್ರೂರ ಕೃತ್ಯಗಳನ್ನು ಕಾಂಗ್ರೆಸ್‌ ಸಹಿಸುವುದಿಲ್ಲ' ಎಂದಿದ್ದಾರೆ.

ತಿರುವನಂತಪುರಂ: ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಕೇರಳದ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, 18 ತಿಂಗಳ ಎಮ್ಮೆ ಕರುವೊಂದನ್ನು ಸಾರ್ವಜನಿಕವಾಗಿಯೇ ಹತ್ಯೆ ಮಾಡಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Scroll to load tweet…

ಈ ಹಿನ್ನೆಲೆಯಲ್ಲಿ 16 ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೇ ಖುದ್ದು ಈ ಘಟನೆ ಖಂಡಿಸಿ, ‘ಇಂಥ ವಿವೇಚನೆ ಇಲ್ಲದ, ಸ್ವೀಕಾರಾರ್ಹವಲ್ಲದ, ಕ್ರೂರ ಕೃತ್ಯಗಳನ್ನು ಕಾಂಗ್ರೆಸ್‌ ಸಹಿಸುವುದಿಲ್ಲ' ಎಂದಿದ್ದಾರೆ.

ಈ ನಡುವೆ, ಕೇರಳ ಸರ್ಕಾರವು ಕೇಂದ್ರದ ನಿಯಮಗಳಿಗೆ ಸಡ್ಡು ಹೊಡೆಯಲು ತನ್ನದೇ ಆದ ಪ್ರತ್ಯೇಕ ಕಾಯ್ದೆ ತರುವ ಸುಳಿವು ನೀಡಿದೆ.