ಹಾಗಾದರೆ  ಟೈಮ್ಸ್ ನೌ ಮುಂದಿನ ನೂತನ ಮುಖ್ಯ ಸಂಪಾದಕರಾಗಿ ಯಾರು ನೇಮಕಗೊಳ್ಳುತ್ತಾರೆ ಎಂಬ ಸುದ್ದಿ ಭಾರತೀಯ ಮಾಧ್ಯಮ ಲೋಕದಲ್ಲಿ ಎಲ್ಲಡೆ ಹರಿದಾಡಿತ್ತು.

ಮುಂಬೈ(ಅ.23): ಇತ್ತೀಚಿಗೆ ಕೆಲವು ದಿನಗಳ ಹಿಂದಷ್ಟೆ ದೇಶದ ಪ್ರಮುಖ ಆಂಗ್ಲ ಸುದ್ದಿ ವಾಹಿನಿ ಸಂಸ್ಥೆ 'ಟೈಮ್ಸ್ ನೌ' ಮುಖ್ಯ ಸಂಪಾದಕನ ಸ್ಥಾನಕ್ಕೆ ಅರ್ನಾಬ್ ಗೋಸ್ವಾಮಿ ರಾಜೀನಾಮೆ ನೀಡಿದ್ದರು. ಹಾಗಾದರೆ ಟೈಮ್ಸ್ ನೌ ಮುಂದಿನ ನೂತನ ಮುಖ್ಯ ಸಂಪಾದಕರಾಗಿ ಯಾರು ನೇಮಕಗೊಳ್ಳುತ್ತಾರೆ ಎಂಬ ಸುದ್ದಿ ಭಾರತೀಯ ಮಾಧ್ಯಮ ಲೋಕದಲ್ಲಿ ಎಲ್ಲಡೆ ಹರಿದಾಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ಮತ್ತೊಂದು ಆಂಗ್ಲ ಸುದ್ದಿ ವಾಹಿನಿ ನ್ಯೂಸ್ ಎಕ್ಸ್'ನ ಮುಖ್ಯ ಸಂಪಾದಾಕರಾದ ರಾಹುಲ್ ಶಿವಶಂಕರ್ ಟೈಮ್ಸ್ ನೌ'ದ ಸಾರಥ್ಯ ವಹಿಸಲಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಮೂಲಗಳ ಪ್ರಕಾರ ಶಿವಶಂಕರ್ ಅವರು ಡಿಸೆಂಬರ್ 15 ರಂದು ಸಂಪಾದಕರಾಗಿ ನೇಮಕಗೊಳ್ಳಲಿದ್ದಾರೆ.

ಶಿವಶಂಕರ್ ಅವರಿಗೆ ಆಂಗ್ಲ ಪತ್ರಿಕೋದ್ಯಮದಲ್ಲಿ 20 ವರ್ಷಗಳ ಅನುಭವವಿದ್ದು ಇಂಡಿಯಾ ಟುಡೆ,ಹೆಡ್'ಲೈನ್ಸ್ ಟುಡೆ ಹಾಗೂ ನ್ಯೂಸ್ ಎಕ್ಸ್ ಚಾನೆಲ್'ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮದೆ ವಾಕ್ ಶೈಲಿಯ ಮೂಲಕ ಎಲ್ಲಡೆ ಪ್ರಸಿದ್ಧಿಯಾಗಿದ್ದ ಅರ್ನಾಬ್ ಗೋಸ್ವಾಮಿ ನವೆಂಬರ್ 1 ರಂದು ಸಂಪಾದಕೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.