2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರದ ರಣಕಹಳೆ ಮೊಳಗಲಿದೆ ಎಂದು ಹೇಳಲಾದ ಜನಾಕ್ರೋಶ ರ್ಯಾಲಿ ಇಂದು ಇಲ್ಲಿ ಆಯೋಜನೆಗೊಂಡಿದ್ದು, ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಲಿದ್ದಾರೆ. 

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರದ ರಣಕಹಳೆ ಮೊಳಗಲಿದೆ ಎಂದು ಹೇಳಲಾದ ಜನಾಕ್ರೋಶ ರ್ಯಾಲಿ ಇಂದು ಇಲ್ಲಿ ಆಯೋಜನೆಗೊಂಡಿದ್ದು, ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಲಿದ್ದಾರೆ.

ವಿಶೇಷವೆಂದರೆ ಜನಾಕ್ರೋಶ ರಾರ‍ಯಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರ ಮೇಲೆ ನಿಗಾ ಇಡಲು ಬಾರ್‌ಕೋಡ್‌ ಇರುವ 40 ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿ ವಿತರಿಸಲಾಗಿದೆ. ಪ್ರತಿಯೊಬ್ಬ ಸ್ಥಳೀಯ ಮುಖಂಡ ಎಷ್ಟುಜನ ಕಾರ್ಯಕರ್ತರನ್ನು ರಾರ‍ಯಲಿಗೆ ಕರೆತಂದಿದ್ದಾನೆ ಎನ್ನುವುದನ್ನು ಲೆಕ್ಕ ಇಡಲಾಗುತ್ತದೆ. ಪ್ರತಿಬಾರಿ ರಾರ‍ಯಲಿ ನಡೆದಾಗಲೂ ಸ್ಥಳೀಯ ಮುಖಂಡರು ತಾವು ಕರೆತಂದ ಕಾರ್ಯಕರ್ತರ ಬಗ್ಗೆ ಉತ್ಪ್ರೇಕ್ಷೇಯ ಅಂಕಿ ಸಂಖ್ಯೆಗಳನ್ನು ನೀಡುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರ್ಯಕರ್ತರ ಬಗ್ಗೆ ವಾರ್ಡ್‌, ಬ್ಲಾಕ್‌ ಮತ್ತು ವಿಧಾನಸಭೆ ಕ್ಷೇತ್ರ ಆಧಾರಿತ ದತ್ತಾಂಶ ಸಂಗ್ರಹಿಸಲು ಮತ್ತು ಅವರ ಮೊಬೈಲ್‌ ನಂಬರ್‌ಗಳನ್ನು ಪಡೆಯಲು ಈ ಪ್ರಕ್ರಿಯೆಯಿಂದ ಸಹಾಯವಾಗುವುದು. ಪ್ರತಿಬಾರಿ ಸಮಾವೇಶ ಆಯೋಜಿಸಿದಾಗಲೆಲ್ಲಾ ಜನರನ್ನು ಒಟ್ಟುಗೂಡಿಸಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ರಾರ‍ಯಲಿಗೆ ಆಗಿಸುವ ಕಾರ್ಯಕರ್ತರಿಗೆ ಪಕ್ಷವೊಂದು ಮೊದಲ ಬಾರಿಗೆ ಗುರುತಿನ ಚೀಟಿ ಒದಗಿಸುತ್ತಿದೆ. ಎರಡು ವಾರಗಳ ಮೊದಲೇ ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಆರಂಭವಾಗಿತ್ತು. ಯೋಜನೆ ಪ್ರಕಾರ, ಪ್ರತಿಯೊಬ್ಬ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ಸ್ಥಳೀಯ ಮುಖಂಡರು ತಮ್ಮ ಪ್ರದೇಶದ ಕಾರ್ಯಕರ್ತರ ಹೆಸರಿನೊಂದಿಗೆ ಆಗಮಿಸಬೇಕು. ಅವರಿಗಾಗಿ ಸಿದ್ಧಪಡಿಸಿರುವ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಸ್ಥಳೀಯ ಮುಖಂಡನೊಬ್ಬ 1000 ಕಾರ್ಡ್‌ಗಳನ್ನು ಕೇಳಿದರೆ ಅದನ್ನು ಪತ್ಯೇಕವಾದ ಎಕ್ಸೆಲ್‌ ಹಾಳೆಯಲ್ಲಿ ಬರೆದುಕೊಳ್ಳಲಾಗುತ್ತದೆ. ರಾರ‍ಯಲಿಯ ಬಳಿಕ ಆತ ಎಷ್ಟುಮಂದಿಯನ್ನು ಕರೆತಂದಿದ್ದಾನೆ ಎನ್ನುವುದನ್ನು ತಪಾಸಣೆ ಮಾಡಲಾಗುತ್ತದೆ.

ರಾಮಲೀಲಾ ಮೈದಾನದ ಪ್ರವೇಶ ಮತ್ತು ಹೊರ ದ್ವಾರದಲ್ಲಿ ಕಂಪ್ಯೂಟರ್‌ ಮತ್ತು ಬಾರ್‌ ಕೋಡ್‌ ಸ್ಕಾ್ಯನರ್‌ ಹೊಂದಿರುವ ನಾಲ್ವರನ್ನು ನಿಯೋಜಿಸಲಾಗುತ್ತದೆ. ಅವರು ರಾರ‍ಯಲಿಗೆ ಎಷ್ಟುಮಂದಿ ಕಾರ್ಯಕರ್ತರು ಬಂದಿದ್ದಾರೆ ಎನ್ನುವುದನ್ನು ಲೆಕ್ಕ ಇಡುತ್ತಾರೆ ಎಂದು ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥ ಅನಿರುದ್ಧ ಶರ್ಮಾ ತಿಳಿಸಿದ್ದಾರೆ.