ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರ ಆಮೇತಿಯಲ್ಲಿ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಕಂಡುಬಂದಿದೆ. ಇದು ಬಿಜೆಪಿ ಮತ್ತು ಆರ್’ಎಸ್’ಎಸ್’ನವರ ಕುಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಆಮೇತಿ (ಆ.08): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರ ಆಮೇತಿಯಲ್ಲಿ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಕಂಡುಬಂದಿದೆ. ಇದು ಬಿಜೆಪಿ ಮತ್ತು ಆರ್’ಎಸ್’ಎಸ್’ನವರ ಕುಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎನ್ನುವ ಪೋಸ್ಟರನ್ನು ನಗರದ ಬೇರೆ ಬೇರೆ ಕಡೆ ಅಂಟಿಸಲಾಗಿದ್ದು, ಅದರ ಕೆಳಗೆ ಹೀಗೆ ಬರೆಯಲಾಗಿದೆ; ಅಮೇತಿಯ ಮಾನ್ಯ ಸಂಸದರಾದ ರಾಹುಲ್ ಗಾಂಧಿ ತಮ್ಮ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ. ಅವರಿಂದ ಸಾಮಾನ್ಯ ಜನರು ಮೋಸಕ್ಕೊಳಗಾಗಿದ್ದಾರೆ. ಅವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಬರೆಯಲಾಗಿದೆ.
ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ಆಮೇತಿಗೆ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಭೇಟಿ ಕೊಟ್ಟ ಆ ಕಡೆ ಹೋಗಿಯೇ ಇಲ್ಲ ಎಂದು ಜನರು ಆರೋಪಿಸಿದ್ದಾರೆ.

