ಕಾಂಗ್ರೆಸ್ ಪಕ್ಷವು ದೇಶದಿಂದ ಭ್ರಷ್ಟಚಾರವನ್ನು ತೊಡೆದುಹಾಕಬಯಸುತ್ತದೆ.  ಭ್ರಷ್ಟಾಚಾರದ ವಿರುದ್ಧ ಸರ್ಕಾರವು ಕೈಗೊಳ್ಳುವ  ಎಲ್ಲಾ ಕ್ರಮಗಳನ್ನು ಪಕ್ಷವು ಬೆಂಬಲಿಸುತ್ತದೆ. ಆದರೆ ಸರ್ಕಾರದ ನೋಟು ಅಮಾನ್ಯ ಕ್ರಮವು ಕಾಳಧನ ಅಥವಾ ಭ್ರಷ್ಟಾಚಾರದ ವಿರುದ್ಧವಲ್ಲ, ಬದಲಾಗಿ ಆರ್ಥಿಕ ದರೋಡೆಯಾಗಿದೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಲ್ಮೋರಾ, ಉತ್ತರಾಖಂಡ (ಡಿ.23): ನೋಟು ಅಮಾನ್ಯ ಕ್ರಮದ ವಿರುದ್ಧ ವಾಗ್ದಾಳಿಯನ್ನು ಮುಂದುವೆರಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅತೀ- ಶ್ರೀಮಂತ 50 ಕುಟುಂಬಗಳಿಗೆ ಲಾಭ ಉಂಟುಮಾಡಲು ಮೋದಿ ಸರ್ಕಾರವು ದೇಶದ ಬಡಜನರನ್ನು ವಂಚಿಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವು ದೇಶದಿಂದ ಭ್ರಷ್ಟಚಾರವನ್ನು ತೊಡೆದುಹಾಕಬಯಸುತ್ತದೆ. ಭ್ರಷ್ಟಾಚಾರದ ವಿರುದ್ಧ ಸರ್ಕಾರವು ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಪಕ್ಷವು ಬೆಂಬಲಿಸುತ್ತದೆ. ಆದರೆ ಸರ್ಕಾರದ ನೋಟು ಅಮಾನ್ಯ ಕ್ರಮವು ಕಾಳಧನ ಅಥವಾ ಭ್ರಷ್ಟಾಚಾರದ ವಿರುದ್ಧವಲ್ಲ, ಬದಲಾಗಿ ಆರ್ಥಿಕ ದರೋಡೆಯಾಗಿದೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮವು ಸರ್ಜಿಕಲ್ ದಾಳಿಯಲ್ಲ ಬದಲಾಗಿ, ಯದ್ವಾತದ್ವಾ ನಡೆಸಿರುವ ಬಾಂಬ್ ದಾಳಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸರ್ಕಾರವು ದೇಶದ ಜನತೆಯನ್ನು 2 ಭಾಗಗಳಲ್ಲಿ ಹಂಚಿದೆ; ಒಂದು ಕಡೆ 50 ಮಂದಿ ಅತೀ-ಶ್ರೀಮಂತ ಕುಟುಂಬಗಳಿವೆ, ಇನ್ನೊಂದು ಕಡೆ ಬಡ, ಪ್ರಾಮಾಣಿಕ ಹಾಗೂ ಕಷ್ಟಪಟ್ಟು ದುಡಿಯುವ ಜನಸಾಮಾನ್ಯರಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿಯವರು ರೈತರ ಸಮಸ್ಯೆಗಳನ್ನು ಆಲಿಸುವುದಿಲ್ಲ, ಅವರ ಸಾಲವನ್ನು ಮನ್ನಾ ಮಾಡುವುದಿಲ್ಲ; ಆದರೆ 15 ಶ್ರೀಮಂತ ಮಂದಿಯ ಸುಮಾರು 1.40 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ, ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.