ವಯನಾಡಿನಿಂದ ಗೆದ್ದ ರಾಹುಲ್ ಗಾಂಧಿ| ರಾಹುಲ್ ಗೆಲುವಿನ ಬೆನ್ನಲ್ಲೇ ಓವೈಸಿ ವಾಗ್ದಾಳಿ| ಮುಸಲ್ಮಾನ ಮತದಾರರಿಂದ ಗೆದ್ದಿದ್ದೀರಿ ಎಂದು ಟಾಂಗ್!

ವಯನಾಡು[ಜೂ.10]: ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿ ಗೆದ್ದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವ AIMIM ಮುಖ್ಯಸ್ಥ ಅಸಾವುದ್ದೀನ್ ಓವೈಸಿ 'ರಾಹುಲ್ ಗಾಂಧಿ ತನ್ನ ಸ್ವಕ್ಷೇತ್ರವಾಗಿದ್ದ ಅಮೇಠಿಯಲ್ಲಿ ಸೋತರೂ, ವಯನಾಡಿನಲ್ಲಿ ಗೆದ್ದಿದ್ದಾರೆ. ವಯನಾಡಿನ ಒಟ್ಟು ಮತದಾರರಲ್ಲಿ ಶೇ. 40ರಷ್ಟು ಮಂದಿ ಮುಸಲ್ಮಾನರಾಗಿರುವುದೇ ಇದಕ್ಕೆ ಕಾರಣ' ಎಂದಿದ್ದಾರೆ.

ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಓವೈಸಿ ಭಾನುವಾರದಂದು ಸಮಾವೇಶವನ್ನುದ್ದೇಶಿಸಿ ಮತನಾಡುತ್ತಾ '1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಹಿರಿಯರು ಹೊಸದೊಂದು ಭಾರತದ ಕನಸು ಕಂಡಿದ್ದರು. ಇದೊಂದು ಸ್ವತಂತ್ರ ಭಾರತ, ಗಾಂಧೀ, ನೆಹರೂ, ಅಂಬೇಡ್ಕರ್ ಹಾಗೂ ಅವರ ನೂರಾರು ಬೆಂಬಲಿಗರದ್ದಾಗುತ್ತದೆ. ಈಗಲೂ ನಮಗೆ ನಮ್ಮ ಹಕ್ಕು ಸಿಗುತ್ತದೆ ಎಂಬ ಭರವಸೆ ನನಗಿದೆ. ನಮಗೆ ಭಿಕ್ಷೆ ಬೇಕಾಗಿಲ್ಲ. ನಾವು ನಿಮ್ಮ ಭಿಕ್ಷೆಯಿಂದ ಬದುಕಲಿಚ್ಛಿಸುವುದಿಲ್ಲ' ಎಂದಿದ್ದಾರೆ.

Scroll to load tweet…

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಓವೈಸಿ 'ನೀವು ಕಾಂಗ್ರೆಸ್ ಹಾಗೂ ಇನ್ನಿತರ ಸೆಕ್ಯೂಲರ್ ಪಕ್ಷಗಳನ್ನು ಬಿಟ್ಟು ಕೊಡಲು ತಯಾರಿಲ್ಲ. ಆದರೆ ಅವರ ಬಳಿ ಯಾವುದೇ ಬಲ ಹಾಗೂ ಯೋಜನೆಗಳಿಲ್ಲ ಎಮಬುವುದನ್ನು ನೆನಪಿಟ್ಟುಕೊಳ್ಳಿ. ಅವರು ಯಾವುದೇ ಶ್ರಮಪಡುವುದಿಲ್ಲ. ಬಿಜೆಪಿ ಎಲ್ಲೆಲ್ಲಾ ಸೋತಿದೆ? ಕೇವಲ ಪಂಜಾಬ್ ನಲ್ಲಿ, ಯಾಕೆಂದರೆ ಅಲ್ಲಿ ಸಿಖ್ಖರ ಪಾರುಪತ್ಯವಿದೆ. ಭಾರತದಲ್ಲಿ ಬೇರೆ ಪ್ರದೇಶಗಳಲ್ಲಿ ಬಿಜೆಪಿ ಸೋಲನುಭವಿಸಿದೆ ಎಂದಾದರೆ ಅದು ಪ್ರಾದೇಶಿಕ ಪಕ್ಷಗಳಿಂದ, ಕಾಂಗ್ರೆಸ್ ನಿಂದಲ್ಲ' ಎಂದಿದ್ದಾರೆ.