ಮತ್ತೊಂದು ರಾಜ್ಯ ಪ್ರವಾಸಕ್ಕೆ ರಾಹುಲ್ ಗಾಂಧಿ ರೆಡಿ; ಸಿಎಂಗಾಗಿ ಉಡುಪಿ ಮಠಕ್ಕೆ ಭೇಟಿಯಿಲ್ಲ?

First Published 13, Mar 2018, 8:54 AM IST
Rahul Gandhi Visits State tour
Highlights

 ರಾಜ್ಯದಲ್ಲಿ ಮತ್ತೊಂದು ಪ್ರವಾಸಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೆಡಿಯಾಗಿದ್ದಾರೆ. ಈ ಬಾರಿ ಕರಾವಳಿ ಮತ್ತು ಮಲೆನಾಡು ಪ್ರವಾಸಕ್ಕೆ ಬರ್ತಿರೋ ರಾಹುಲ್ ಪ್ರವಾಸದಲ್ಲಿ ಟೆಂಪಲ್ ರನ್ ಮಿಸ್ ಆಗಿದೆ. ಉಡುಪಿ ಜಿಲ್ಲೆಗೆ ಬರುವ ರಾಹುಲ್ ಗಾಂಧಿ, ಉಡುಪಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿಲ್ಲ. ರಾಹುಲ್ ಜೊತೆಗೆ ಸಿಎಂ ಸಿದ್ಧರಾಮಯ್ಯ ಅವರು ಪ್ರವಾಸದಲ್ಲಿ ಇರೋ ಕಾರಣಕ್ಕೆ ಟೆಂಪಲ್ ರನ್ ಮಿಸ್ ಆಯ್ತಾ ಅನ್ನೊ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿದೆ.
 

ಬೆಂಗಳೂರು (ಮಾ. 13): ರಾಜ್ಯದಲ್ಲಿ ಮತ್ತೊಂದು ಪ್ರವಾಸಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೆಡಿಯಾಗಿದ್ದಾರೆ. ಈ ಬಾರಿ ಕರಾವಳಿ ಮತ್ತು ಮಲೆನಾಡು ಪ್ರವಾಸಕ್ಕೆ ಬರ್ತಿರೋ ರಾಹುಲ್ ಪ್ರವಾಸದಲ್ಲಿ ಟೆಂಪಲ್ ರನ್ ಮಿಸ್ ಆಗಿದೆ. ಉಡುಪಿ ಜಿಲ್ಲೆಗೆ ಬರುವ ರಾಹುಲ್ ಗಾಂಧಿ, ಉಡುಪಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿಲ್ಲ. ರಾಹುಲ್ ಜೊತೆಗೆ ಸಿಎಂ ಸಿದ್ಧರಾಮಯ್ಯ ಅವರು ಪ್ರವಾಸದಲ್ಲಿ ಇರೋ ಕಾರಣಕ್ಕೆ ಟೆಂಪಲ್ ರನ್ ಮಿಸ್ ಆಯ್ತಾ ಅನ್ನೊ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿದೆ.

ಶತಾಯಗತಾಯ ರಾಜ್ಯದಲ್ಲಿ ಮತ್ತೇ ಅಧಿಕಾರ ಹಿಡಿಯಬೇಕು ಅನ್ನೋ ಕಾರಣಕ್ಕೆ ರಾಜ್ಯದಲ್ಲಿ ಅಬ್ಬರದ ಪ್ರವಾಸ ಮಾಡ್ತಿರೋ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳು 20 ರಿಂದ 22 ರವರೆಗೆ ಮತ್ತೊಂದು ಸುತ್ತಿನ ಪ್ರವಾಸಕ್ಕೆ ರೆಡಿಯಾಗಿದ್ದಾರೆ. ಈ ಬಾರಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರವಾಸಕ್ಕೆ ವೇಳಾಪಟ್ಟಿ ಸಿದ್ಧಗೊಳ್ಳುತ್ತಿದೆ. ಆದ್ರೆ ಈ ಬಾರಿಯ ಪ್ರವಾಸದಲ್ಲಿ ಟೆಂಪಲ್ ರನ್ ಮಿಸ್ ಆಗೋದು ಗ್ಯಾರಂಟಿಯಾಗಿದೆ.

ತಾತ್ಕಾಲಿಕವಾಗಿ ಸಿದ್ಧವಾಗ್ತಿರೋ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 20 ರಾತ್ರಿ ಮಂಗಳೂರಿಗೆ ಬಂದು ತಂಗಲಿರೋ ರಾಹುಲ್ ಗಾಂಧಿ 21 ರಂದು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಆಗಮಿಸಿ ಶಾರದಾ ಪೀಠಕ್ಕೆ ಭೇಟಿ ಕೊಡಲಿದ್ದಾರೆ. ನಂತರ ನೇರವಾಗಿ ಚಿಕ್ಕಮಗಳೂರು ಜಿಲ್ಲಾ ಮೈದಾನಕ್ಕೆ ಆಗಮಿಸಿ ಜನಾರ್ಶಿವಾದ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 
ಆಶ್ಚರ್ಯ ಎಂದ್ರೆ, ಉಡುಪಿ ಮಠಕ್ಕೆ ಹೋಗದ ರಾಹುಲ್ ಗಾಂದಿ ಮತ್ತು ಸಿಎಂ ಸಿದ್ಧರಾಮಯ್ಯ ಅವರು ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಲಿದ್ದಾರೆ. 
 

loader