ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರಗಿಡಲು ದೇವೇಗೌಡರ ಮೊರೆ ಹೋದ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ  ಮಾಯಾವತಿ ಜೊತೆ ಮೈತ್ರಿಗೆ ಮುಂದಾಗಿದೆ. ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್‌ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ.

ಬೆಂಗಳೂರು (ಜೂ. 12): ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರಗಿಡಲು ದೇವೇಗೌಡರ ಮೊರೆ ಹೋದ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಾಯಾವತಿ ಜೊತೆ ಮೈತ್ರಿಗೆ ಮುಂದಾಗಿದೆ.

ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್‌ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ. ಇನ್ನು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನಿಂದ ದೂರ ಹೋಗಿರುವ ಅಜಿತ್ ಜೋಗಿಯವರ ಪತ್ನಿಗೆ ಅಮೆರಿಕದಿಂದ ಫೋನಾಯಿಸಿದ್ದ ರಾಹುಲ್, ಅಜಿತ್ ಜೋಗಿಯವರ ಆರೋಗ್ಯ ವಿಚಾರಿಸಿದ್ದರು.

ಅವರನ್ನು ಮತ್ತೆ ವಾಪಸ್ ಕರೆದುಕೊಳ್ಳುವ ಇರಾದೆ ರಾಹುಲ್‌ಗೆ ಇದ್ದಂತಿದೆ. ನೇರವಾಗಿ ಮೋದಿಯನ್ನು ಸೋಲಿಸೋದು ಕಷ್ಟ ಎಂದು ಅರಿತಿರುವ ರಾಹುಲ್ ಈಗ ಅನೇಕರ ಬಳಿ ಮಿತ್ರರಾಗಿ ಪ್ಲೀಸ್ ಮಿತ್ರರಾಗಿ ಎನ್ನುತ್ತಿದ್ದಾರೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ