ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಾಯಾಸವಾಗಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗಲು ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ನಡುವೆ ಪೈಪೋಟಿ ನಡೆದಿದ್ದು, ಇದು ರಾಹುಲ್‌ಗೂ ದೊಡ್ಡ ತಲೆನೋವು ತಂದಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ಸ್ಥಿತಿ ಏರ್ಪಟ್ಟಿರುವುದರಿಂದ ನಿಧಾನವಾಗಿ ವಸುಂಧರಾ ಚೇತರಿಕೆ ಕಾಣುತ್ತಿರುವುದು ಕಾಂಗ್ರೆಸ್‌ನವರೇ ಮಾಡಿಸಿದ ಸರ್ವೇಗಳಲ್ಲಿ ಕಾಣುತ್ತಿದೆ. ಮಾನಸ ಸರೋವರದಿಂದ ಹಿಂತಿರುಗಿದ ನಂತರ ರಾಹುಲ್ ರಾಜಸ್ಥಾನದ ಬಗ್ಗೆ ಒಂದು ನಿರ್ಣಯ ತೆಗೆದುಕೊಳ್ಳಬಹುದು.

ಪರಂ, ಡಿಕೆಶಿ ಬಗ್ಗೆ ಏನು ಬೇಸರ?
ಸಿದ್ದು ದಿಲ್ಲಿ ನಾಯಕರ ಎದುರು ಹೇಳಿಕೊಂಡಿರುವ ಪ್ರಕಾರ ನಿಧಾನವಾಗಿ ದೇವೇಗೌಡರ ಕುಟುಂಬದ ಆಡಳಿತ ‘ಒಕ್ಕಲಿಗರ ಸರ್ಕಾರ’ ಎಂದು ಜನ ಮಾತನಾಡಿಕೊಳ್ಳುವಂತಾಗಿದ್ದು, ನಾವು ಕಾಂಗ್ರೆಸ್ಸಿಗರು ಸ್ವಲ್ಪವೂ ಪ್ರತಿರೋಧ ತೋರದೇ ಇದ್ದರೆ ಹಿಂದುಳಿದ ವರ್ಗಗಳು ಬಿಜೆಪಿಯತ್ತ ವಾಲಬಹುದು. ಸರ್ಕಾರದಲ್ಲಿದ್ದರೂ ಕೂಡ ಅವಶ್ಯಕತೆ ಇದ್ದಲ್ಲಿ ಧ್ವನಿ ಎತ್ತಬೇಕು. ಆಗ ನಮ್ಮ ಕಾರ್ಯಕರ್ತರು, ಮತದಾರರು ಸಕ್ರಿಯರಾಗಿರುತ್ತಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರು ದೇವೇಗೌಡರ ಎದುರು ಪೂರ್ತಿ ಶರಣಾಗಿದ್ದಾರೆ ಎಂದು ಕೂಡ ಸಿದ್ದು ಹೇಳಿಕೊಂಡಿದ್ದಾರೆ.

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)

(ಸಾಂದರ್ಭಿಕ ಚಿತ್ರ)