ಕೇಂದ್ರದಿಂದ 15 ಉದ್ಯಮಿಗಳ 2.5 ಲಕ್ಷ ಕೋಟಿ ರು. ಸಾಲ ಮನ್ನಾ

Rahul Gandhi Slams PM Modi Govt
Highlights

 ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮೋದಿ ಅವರು ರೈತರ ಹಿತಾಸಕ್ತಿ ಬದಿಗೊತ್ತಿ, 15 ಕೈಗಾರಿಕೋದ್ಯಮಿಗಳ 2.5 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮೋದಿ ಅವರು ರೈತರ ಹಿತಾಸಕ್ತಿ ಬದಿಗೊತ್ತಿ, 15 ಕೈಗಾರಿಕೋದ್ಯಮಿಗಳ 2.5 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಮವಾರ ಪಕ್ಷದ ಹಿಂದುಳಿದ ವರ್ಗದ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಯಾರು ಬೆವರು ಸುರಿಸಿ ದುಡಿದರೋ ಅವರಿಗೆ ಪ್ರತಿಫಲ ದೊರಕುತ್ತಿಲ್ಲ. ಅದರ ಫಲವನ್ನು ಇನ್ನೊಬ್ಬರು ಉಣ್ಣುತ್ತಿದ್ದಾರೆ’ ಎಂದು ಆರೋಪಿಸಿದರು.

ಕೌಶಲ್ಯ ಇದ್ದವರಿಗೂ ದೇಶದಲ್ಲಿ ಬೆಲೆ ಇಲ್ಲವಾಗಿದೆ. ರೈತರು ಮಾಡಿದ ಸಾಧನೆ ಮೋದಿ ಅವರ ಕಣ್ಣಿಗೆ ಕಾಣದಾಗಿದೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ 1 ಸಾವಿರ ಕೋಟಿ ರು.ಗಳಿಗೆ ಏರಿದೆ ಎಂದು ಆಪಾದಿಸಿದರು.

‘15 ಉದ್ಯಮಿಗಳಿಗೆ 2.5 ಲಕ್ಷ ಕೋಟಿ ರು. ಸಾಲ ನೀಡಲಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಏನೂ ಸಿಗಲಿಲ್ಲ. ಆದರೆ ಈ 15 ಜನರಿಗೆ ಮಾತ್ರ ಸಾಲ ಮನ್ನಾ ಭಾಗ್ಯ ದೊರಕಿತು ಎಂದು ಆಪಾದಿಸಿದರು.

loader