ನವದೆಹಲಿ[ಜೂ.26]  ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತ, ಧ್ಯಾನ ಮಾಡುತ್ತ ಕುಳಿತುಕೊಂಡಿದ್ದರೆ ಅವರದ್ದೆ ಉದ್ಯಾನದ ಹೊರಗೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ವರದಿಯೊಂದರ ಆಧಾರದಲ್ಲಿ ಭಾರತ ಪ್ರಪಂಚದಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ತಾಣ ಎಂದು ಬಿಂಬಿತವಾದ ಮೇಲೆ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ವಿಚಾರದಲ್ಲಿ ಭಾರತ ಅಫ್ಘಾನಿಸ್ತಾನ, ಸಿರಿಯಾ ಮತ್ತು ಸೌದಿ ಅರೇಬಿಯಾವನ್ನು ಮೀರಿಸುತ್ತಿದೆ. ಇದು ನಮ್ಮ ದೇಶಕ್ಕೆ ಎಂತಹ ಅಪಮಾನ ತಂದಿಟ್ಟಿದೆ ಎಂದು ರಾಹುಲ್ ಖೇದ ವ್ಯಕ್ತಪಡಿಸಿದ್ದಾರೆ.

ಮನ್ಸ್ ವ್ರೈಟರ್ಸ್ ಸಂಸ್ಥೆ ಮಾಡಿರುವ ಸರ್ವೇ ಈ ಆಘಾತಕಾರಿ ಅಂಶವನ್ನು ಹೊರಹಾಕಿತ್ತು.  ಇದೇ ಅವಕಾಶ ಬಳಸಿಕೊಂಡ ರಾಹುಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರಕ್ಕೆ ಟಾಂಗ್ ನೀಡುವ ಕೆಲಸ ಮಾಡಿದ್ದಾರೆ.