ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಕ್ಸರ್ ವಿಜೇಂದ್ರ ಸಿಂಗ್ ಅವರು ಮಾತನಾಡಿ, ರಾಜಕಾರಣಿಗಳೇಕೆ ಕ್ರೀಡೆಯಲ್ಲಿ ಸಕ್ರಿಯರಾಗಿಲ್ಲ ಎಂದು ರಾಹುಲ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್, ಜಪಾನ್ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ತಾವು ಬ್ಲ್ಯಾಕ್‌ಬೆಲ್ಟ್ ಪಡೆದಿರುವುದಾಗಿ ಹೇಳಿದ್ದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಕ್ಸರ್ ವಿಜೇಂದ್ರ ಸಿಂಗ್ ಅವರು ಮಾತನಾಡಿ, ರಾಜಕಾರಣಿಗಳೇಕೆ ಕ್ರೀಡೆಯಲ್ಲಿ ಸಕ್ರಿಯರಾಗಿಲ್ಲ ಎಂದು ರಾಹುಲ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್, ಜಪಾನ್ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ತಾವು ಬ್ಲ್ಯಾಕ್‌ಬೆಲ್ಟ್ ಪಡೆದಿರುವುದಾಗಿ ಹೇಳಿದ್ದರು. ಅದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, ಮಾಧ್ಯಮವೊಂದು ರಾಹುಲ್‌ರ ಐಕಿಡೋ ಕೋಚ್ ಸೆನ್ಸೆಯ್ ಪ್ಯಾರಿಟೋಸ್ ಕಾರ್ ಅವರನ್ನು ಸಂದರ್ಶನ ಮಾಡಿದೆ. ರಾಹುಲ್ ಮಾರ್ಷಲ್ ಆರ್ಟ್ ಅಭ್ಯಾಸ ಮಾಡಿರುವುದು ನಿಜ ಎಂದು ತಿಳಿಸಿದ್ದರು.

ಇದೀಗ ರಾಹುಲ್ ಗಾಂಧಿ ಸೆನ್ಸಾಯಿ ಪ್ಯಾರಿಟೋ ಕರ್ ಅವರೊಂದಿಗೆ ಐಕಿಡೋ ಅಭ್ಯಾಸ ಮಾಡುವ ಫೋಟೋಗಳನ್ನು ಒಬ್ಬರು  ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿವೆ. ರಾಹುಲ್ ಗಾಂಧಿ ಬ್ರೆಜಿಲ್‌ನ ಮಾರ್ಷಲ್ ಆರ್ಟ್ ಜಿಯು-ಜಿಟ್ಸು ಕಲಿತಿದ್ದಾರೆ. ಜಪಾನ್‌ನ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿದ್ದಾರೆ. ಕತ್ತಿ ವರಸೆಯೂ ಅವರಿಗೆ ಗೊತ್ತಿದೆ ಎಂದು ಹೇಳಲಾಗಿದೆ.

Scroll to load tweet…