ರಾಹುಲ್ ತಂದೆ ರಾಜೀವ್‌ ಮತ್ತು ತಾಯಿ ಸೋನಿಯಾ ಇಬ್ಬರಿಗೂ ಪಾಲಿಟಿಕ್ಸ್‌ ಎಳ್ಳಷ್ಟೂಇಷ್ಟಇರಲಿಲ್ಲ. ಆದರೆ ಇಬ್ಬರೂ ಒಮ್ಮೆ ರಾಜಕೀಯಕ್ಕೆ ಬಂದ ನಂತರ ಹಿಂತಿರುಗಿ ನೋಡಿದವರಲ್ಲ. ಆದರೆ ರಾಹುಲ್ ಮಾತ್ರ ಅಂತರಾತ್ಮದ ಮಾತು ಕೇಳಿ ರಾಜೀನಾಮೆಗೆ ಪಟ್ಟು ಹಿಡಿದಿರುವುದು ಕಾಂಗ್ರೆಸ್‌ನಲ್ಲಿ ಸಂಕಟ ಸೃಷ್ಟಿಸಿದೆ.

ಸಿದ್ದರಾಮಯ್ಯರಿಂದ ಹಿಡಿದು ಅಶೋಕ್‌ ಗೆಹ್ಲೋಟ್‌ವರೆಗೆ ಎಲ್ಲ ನಾಯಕರು ಹುಟ್ಟುಹಬ್ಬದ ನೆಪ ಮಾಡಿಕೊಂಡು ದಿಲ್ಲಿಗೆ ಬಂದು ರಾಹುಲ್ ಮೇಲೆ ಒತ್ತಡ ಹಾಕಿದರೂ ರಾಜೀನಾಮೆ ಹಿಂಪಡೆಯಲು ಅವರು ಒಪ್ಪಿಲ್ಲ. ಮರುದಿನ ಪಾರ್ಲಿಮೆಂಟ್‌ಗೆ ಬಂದಿದ್ದ ರಾಹುಲ್ ಪತ್ರಕರ್ತರ ಎದುರು, ‘ರಾಜೀನಾಮೆ ಅಚಲ. ಹಿಂದೆ ತಗೊಳೋದಿಲ್ಲ’ ಎಂದು ಹೇಳಿ ಹೋಗಿದ್ದಾರೆ.

ಆಶ್ಚರ್ಯ ಎಂದರೆ ಅಧ್ಯಕ್ಷ ಸ್ಥಾನ ಬಿಟ್ಟು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನಾಗಬಹುದು ಎಂದುಕೊಂಡು ಕೇಳಲು ಹೋದವರಿಗೂ, ‘ಬೇಡ ನಾನು ಆಗೋದಿಲ್ಲ’ ಎಂದು ಹೇಳಿ ಕಳುಹಿಸಿದ್ದಾರೆ. ಸೋಲಿಗೆ ನೈತಿಕ ಹೊಣೆ ಹೊರೋದು ಒಳ್ಳೆಯದಾದರೂ ಮುಂದೆ ನಿಂತು ಪಕ್ಷ ಕಟ್ಟಬೇಕಾದ ನಾಯಕನೇ ನಾಜೂಕಿನ ಸ್ಥಿತಿಯಲ್ಲಿ ಶಸ್ತ್ರತ್ಯಾಗ ಮಾಡುವುದು ಒಳ್ಳೆಯ ಬೆಳವಣಿಗೆ ಏನಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್ ’ ಕ್ಲಿಕ್ ಮಾಡಿ