ಮೋದಿಗೆ ಮಸಿ ಬಳಿಯಲು ನಡೆಯುತ್ತಿದೆ ಶತಪ್ರಯತ್ನ

First Published 20, Feb 2018, 3:18 PM IST
Rahul Gandhi Plan Against PM Modi
Highlights

ಕಾಂಗ್ರೆಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಸಾಮಾನ್ಯ ಜನರಲ್ಲಿ ಪ್ರಧಾನಿ ಮೋದಿ ಸ್ವಂತಕ್ಕೆ ಏನೂ ಮಾಡಿಕೊಳ್ಳುವ ಭ್ರಷ್ಟ ವ್ಯಕ್ತಿಯಲ್ಲ ಎಂಬ ಅಭಿಪ್ರಾಯ ಇದ್ದೇ ಇದೆ. ಹೀಗಾಗಿ ಮೋದಿ ವ್ಯಕ್ತಿತ್ವಕ್ಕೆ ಸ್ವಲ್ಪ ಕುಂದು ತರಬೇಕಾದರೆ ಭ್ರಷ್ಟಾಚಾರದ ಪ್ರಕರಣಗಳನ್ನು ಹೇಗಾದರೂ ಮಾಡಿ ಮೆತ್ತಬೇಕು ಎನ್ನುವುದು ರಾಹುಲ್ ಪ್ರಯತ್ನ.

ಪ್ರಶಾಂತ್ ನಾತು

ನವದೆಹಲಿ : ಕಾಂಗ್ರೆಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಸಾಮಾನ್ಯ ಜನರಲ್ಲಿ ಪ್ರಧಾನಿ ಮೋದಿ ಸ್ವಂತಕ್ಕೆ ಏನೂ ಮಾಡಿಕೊಳ್ಳುವ ಭ್ರಷ್ಟ ವ್ಯಕ್ತಿಯಲ್ಲ ಎಂಬ ಅಭಿಪ್ರಾಯ ಇದ್ದೇ ಇದೆ. ಹೀಗಾಗಿ ಮೋದಿ ವ್ಯಕ್ತಿತ್ವಕ್ಕೆ ಸ್ವಲ್ಪ ಕುಂದು ತರಬೇಕಾದರೆ ಭ್ರಷ್ಟಾಚಾರದ ಪ್ರಕರಣಗಳನ್ನು ಹೇಗಾದರೂ ಮಾಡಿ ಮೆತ್ತಬೇಕು ಎನ್ನುವುದು ರಾಹುಲ್ ಪ್ರಯತ್ನ.

ಮೊದಲಿಗೆ ಹತ್ತು ಲಕ್ಷದ ಸೂಟ್, ಅದಾನಿ ಜೊತೆಗಿನ ಸಂಬಂಧದ ಬಗ್ಗೆ ರಾಹುಲ್ ಎಷ್ಟೇ ಹೇಳಿದರೂ ಯಾವ ಚುನಾವಣೆಯಲ್ಲಿಯೂ ಜನ ಅದನ್ನು ಒಪ್ಪಿಕೊಳ್ಳಲಿಲ್ಲ.

ಹೀಗಾಗಿ ಗುಜರಾತ್ ಚುನಾವಣೆಯಲ್ಲಿ ರಫೆಲ್ ಡೀಲ್ ಬಗ್ಗೆ ಮಾತನಾಡಿದ ರಾಹುಲ್ ಈಗ ನೀರವ್ ಮೋದಿ ಎಳೆಯನ್ನು ಮೋದಿ ಎಂಬ ಅಡ್ಡ ಹೆಸರಿನ ಕಾರಣದಿಂದ ನಮೋ ಜೊತೆಗೆ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

loader