ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಬಿಂಬಿಸಿದ್ದರೂ, ಆರೆಸ್ಸೆಸ್ ಬೆಂಬಲವಿಲ್ಲದ ಪ್ರತಿಪಕ್ಷದ ಯಾರೇ ನಾಯಕರನ್ನು ಬೆಂಬಲಿಸಲೂ ಪಕ್ಷ ಸಿದ್ಧವಿದೆ ಎಂಬ ಮುನ್ಸೂಚನೆ ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ರಾಜ್ಯಮಟ್ಟದಲ್ಲಿ ವಿವಿಧ ಪಕ್ಷಗಳೊಂದಿಗೆ ಮೈತ್ರಿ ನಡೆಸಲು ಮುಕ್ತವಾಗಿದೆ ಎನ್ನಲಾಗಿದೆ. 

ಸಂಭಾವ್ಯ ಮೈತ್ರಿಕೂಟದಲ್ಲಿ ಮಹಿಳಾ ಅಭ್ಯರ್ಥಿಗೆ ರಾಹುಲ್ ಸ್ಥಾನ ಬಿಟ್ಟುಕೊಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ನಾಯಕರೊಬ್ಬರು ಈ ಉತ್ತರ ನೀಡಿದ್ದಾರೆ. ಪ್ರಧಾನಿ ಅಭ್ಯರ್ಥಿಗಳ ಪೈಕಿ ಮಾಯಾವತಿ ಹೆಸರು ಕೇಳಿಬರುತ್ತಿದೆ.