ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಧೋರಣೆಗಳಿಂದ ದೂರ ಸರಿದು ಹಿಂದುತ್ವದ ಬಗ್ಗೆ ಮೃಧುಧೋರಣೆ ತಾಳುತ್ತಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಧೋರಣೆಗಳಿಂದ ದೂರ ಸರಿದು ಹಿಂದುತ್ವದ ಬಗ್ಗೆ ಮೃಧುಧೋರಣೆ ತಾಳುತ್ತಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ. ಅಲ್ಲದೆ, ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆತಂಕಿತಗೊಂಡಿದ್ದಾರೆ ಎನ್ನಲಾದ ಮುಸ್ಲಿಂ ಬುದ್ಧಜೀವಿಗಳ ನಿಯೋಗವೊಂದು ಬುಧವಾರ ಇಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ತಮ್ಮ ಕಳವಳವನ್ನು ಹೊರಹಾಕಿತ್ತು. ಈ ವೇಳೆ, ಸಮಾಜದ ಯಾವುದೇ ನಿರ್ದಿಷ್ಟಧರ್ಮ ಅಥವಾ ನಿರ್ದಿಷ್ಟಗುಂಪಿನ ಬಗ್ಗೆ ಕಾಂಗ್ರೆಸ್ ಯಾವುದೇ ನಿರ್ದಿಷ್ಟಹಿತಾಸಕ್ತಿ ಹೊಂದಿಲ್ಲ.
ಸಮಾಜವನ್ನು ಒಂದಾಗಿ ಮುಂದೆ ತೆಗೆದುಕೊಂಡು ಹೋಗುವುದು ಮಾತ್ರವೇ ಪಕ್ಷದ ಹಿತಾಸಕ್ತಿ. ನಾವು ನಮ್ಮ ಸಿದ್ಧಾಂತದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಭರವಸೆಯನ್ನು ರಾಹುಲ್ ನಿಯೋಗಕ್ಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
