‘ವಿಕೆಟ್ ಕೀಪರ್’ನತ್ತ ನೋಡಿ ಮೋದಿ ಬ್ಯಾಟಿಂಗ್!’

First Published 11, Feb 2018, 10:07 PM IST
Rahul Gandhi likens PM Modi to cricketer who bats looking at keeper
Highlights

ಪ್ರಧಾನಿ ಮೋದಿ ಹಿನ್ನೋಟ ಕನ್ನಡಿ ನೋಡಿಕೊಂಡು ಗಾಡಿ ಓಡಿಸುವ ಮೂಲಕ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ ಎಂದು ನಿನ್ನೆ ವ್ಯಂಗ್ಯವಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು, ವಿಕೆಟ್ ಕೀಪರನನ್ನು ನೋಡಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್’ಮ್ಯಾನ್’ಗೆ ಮೋದಿಯವರನ್ನು ಹೋಲಿಸಿದ್ದಾರೆ.   

ಸಿಂಧನೂರು: ಪ್ರಧಾನಿ ಮೋದಿ ಹಿನ್ನೋಟ ಕನ್ನಡಿ ನೋಡಿಕೊಂಡು ಗಾಡಿ ಓಡಿಸುವ ಮೂಲಕ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ ಎಂದು ನಿನ್ನೆ ವ್ಯಂಗ್ಯವಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು, ವಿಕೆಟ್ ಕೀಪರನನ್ನು ನೋಡಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್’ಮ್ಯಾನ್’ಗೆ ಮೋದಿಯವರನ್ನು ಹೋಲಿಸಿದ್ದಾರೆ.   

ಸಿಂಧನೂರಿನಲ್ಲಿ ಜನಾಶಿರ್ವಾದ ಸಭೆಯನ್ನುದ್ದೇಶಿಸಿ, ಬ್ಯಾಟಿಂಗ್ ಮಾಡುವ ವೇಳೆ ವಿಕೆಟ್ ಕೀಪರ್’ನನ್ನು ನೋಡುತ್ತಾ  ಬ್ಯಾಟಿಂಗ್ ಮಾಡಿದ್ದರೆ ಸಚಿನ್ ತೆಂಡೂಲ್ಕರ್ ರನ್ ಗಳಿಸಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ ರಾಹುಲ್, ಪ್ರಧಾನಿ ಮೋದಿಯವರು ವಿಕೆಟ್ ಕೀಪರ್’ನತ್ತ ನೋಡುತ್ತಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಾಲ್ ಎಲ್ಲಿಂದ ಬರುತ್ತಿದೆ ಎಂದೇ ಅವರಿಗೆ ಗೊತ್ತಿಲ್ಲ, ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ಬುಧವಾರ ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದುದ್ದಕ್ಕೂ ನೆಹರೂ ನೀತಿಗಳನ್ನು ಹಾಗೂ ಕಾಂಗ್ರೆಸ್’ನ್ನು ಟೀಕಿಸಿದ್ದರು.

ಶನಿವಾರದಂದು ಬಳ್ಳಾರಿ ಜನಾಶಿರ್ವಾದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲೂ, ಪ್ರಧಾನಿ ಮೋದಿ ಹಿನ್ನೋಟ ಕನ್ನಡಿ ನೋಡಿಕೊಂಡು ಗಾಡಿ ಓಡಿಸುವ ಮೂಲಕ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ, ಮುಂದೆ ನೋಡಿ ಗಾಡಿ ಓಡಿಸಿ ಎಂದು ಟೀಕಿಸಿದ್ದರು.

loader