ಪ್ರಧಾನಿ ಮೋದಿಯವರು ಭ್ರಷ್ಟಾಚಾರ ನಡೆಸಿದ್ದಾರೆನ್ನುವುದಕ್ಕೆ ನನ್ನ ಬಳಿ ಎಕ್ಸ್ ಕ್ಲೂಸಿವ್ ಸಾಕ್ಷಿಗಳಿವೆ ಎಂದಿರುವ ರಾಹುಲ್ ಗಾಂಧಿಗೆ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಅಂತಹ ಸಾಕ್ಷಿಗಳಿದ್ದರೆಅದನ್ನು ಪೋಲಿಸರು ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ರಾಹುಲ್ ಗೆ ಹೇಳಿದ್ದಾರೆ.

ನವದೆಹಲಿ (ಡಿ.15): ಪ್ರಧಾನಿ ಮೋದಿಯವರು ಭ್ರಷ್ಟಾಚಾರ ನಡೆಸಿದ್ದಾರೆನ್ನುವುದಕ್ಕೆ ನನ್ನ ಬಳಿ ಎಕ್ಸ್ ಕ್ಲೂಸಿವ್ ಸಾಕ್ಷಿಗಳಿವೆ ಎಂದಿರುವ ರಾಹುಲ್ ಗಾಂಧಿಗೆ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಅಂತಹ ಸಾಕ್ಷಿಗಳಿದ್ದರೆ

ಅದನ್ನು ಪೋಲಿಸರು ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ರಾಹುಲ್ ಗೆ ಹೇಳಿದ್ದಾರೆ.

ಯಾವುದಾದರೂ ಅಪರಾಧ, ಭ್ರಷ್ಟಾಚಾರ ನಡೆದಿರುವುದು ಗೊತ್ತಿದ್ದು ಅದನ್ನು ಪೋಲಿಸರಿಗೆ ತಿಳಿಸದೇ ಹೋದರೆ 3 ವರ್ಷ ಶಿಕ್ಷೆ ವಿಧಿಸಬಹುದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ರಾಹುಲ್ ಗಾಂಧಿ ಕಾನೂನಿಗೆ ತಲೆಬಾಗಿ ಆ ಎಕ್ಸ್ ಕ್ಲೂಸಿವ್ ಪುರಾವೆಯನ್ನು ನ್ಯಾಯಾಲಯಕ್ಕೆ ಅಥವಾ ಪೋಲಿಸರಿಗೆ ಸಲ್ಲಿಸಬೇಕು ಎಂದು ಸ್ವಾಮಿ ಹೇಳಿದ್ದಾರೆ.