ಶೃಂಗೇರಿ ಶಾರದಾ ಪೀಠಕ್ಕೆ ರಾಹುಲ್ ಗಾಂಧಿ ಐತಿಹಾಸಿಕ ಭೇಟಿ

First Published 21, Mar 2018, 8:54 AM IST
Rahul Gandhi Historical Visit to Shrungeri
Highlights

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿ ನೀಡಲಿದ್ದಾರೆ.  ಶೃಂಗೇರಿ ಐತಿಹಾಸಿಕ ಮೊದಲ ಭೇಟಿಗೆ  ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. 

ಬೆಂಗಳೂರು (ಮಾ. 21):  ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿ ನೀಡಲಿದ್ದಾರೆ.  ಶೃಂಗೇರಿ ಐತಿಹಾಸಿಕ ಮೊದಲ ಭೇಟಿಗೆ  ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. 

ಶೃಂಗೇರಿ ಶಾರದ ಪೀಠಕ್ಕೂ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ.  ರಾಷ್ಟ್ರಾಧ್ಯಂತ ಕಾಂಗ್ರೆಸ್ ನೆಲಕಚ್ಚಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು.  ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಶೃಂಗೇರಿ ಗೆ ಭೇಟಿ ನೀಡಿದ್ದ ಇಂದಿರಾಗಾಂಧಿ ಶಕ್ತಿ ದೇವತೆ ಶಾರದಾಂಬೆಯ ದರ್ಶನ ಮಾಡಿ ಗೆಲುವಿನ ಆಶಿರ್ವಾದ ಬೇಡಿದ್ದರು. ಗೆದ್ದ ನಂತರವೂ  ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದರು.
ಶೃಂಗೇರಿ ಮಠಕ್ಕೆ  ರಾಜೀವ್ ಗಾಂಧಿ ಸಹ ಹಲವು ಬಾರಿ ಭೇಟಿ ನೀಡಿದ್ದರು.  ಗಾಂಧಿ ಕುಟುಂಬದ ನಾಲ್ಕನೆ ಕುಡಿ ರಾಹುಲ್ ಇದೇ ಮೊದಲ ಬಾರಿಗೆ ಶೃಂಗೇರಿಗೆ ಭೇಟಿ ನೀಡಲು ಮುಂದಾಗಿದ್ದಾರೆ. 
ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ‌ ನೀಡಿದ್ದ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಈ ಹಿಂದೆ ತಮ್ಮ ಅಜ್ಜಿ ಭಾಷಣ ಮಾಡಿದ್ದ ಮೈದಾನದಲ್ಲೇ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
 

loader