ನವದೆಹಲಿ :  ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬಂದಿದೆ.

ಅಮೇಠಿಯಲ್ಲಿ ರಾಹುಲ್ ಗಾಂಧಿ ಸ್ಮೃತಿ ಇರಾನಿ ವಿರುದ್ಧ ಸೋತಲ್ಲಿ ತಾವು ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದ ಸಿಧು ವಿರುದ್ಧ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ಶೀಘ್ರ ಸ್ಥಾನ ತೊರೆಯುವಂತೆ ಹೇಳಿದ್ದಾರೆ. 

 

ಕಳೆದ ಏಪ್ರಿಲ್ ನಲ್ಲಿ ಉತ್ತರ ಪ್ರದೇಶದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಸಿಧು ಒಂದು ವೇಳೆ ರಾಹುಲ್ ಸೋತರೆ ತಾವು ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದರು. 

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಲ್ಲಿ ಐತಿಹಾಸಿಕ ಎನ್ನಬಹುದಾದ ಸೋಲು ಕಂಡಿದ್ದಾರೆ. ಇಲ್ಲಿ ಕೇಂದ್ರ ಸಚಿವೆ, ಬಿಜೆಪಿಯ ಸ್ಮತಿ ಇರಾನಿ, ರಾಹುಲ್‌ರನ್ನು 52648   ಮತಗಳಿಂದ ಸೋಲಿಸಿದ್ದಾರೆ. ರಾಹುಲ್‌ಗೆ 400834 ಮತ , ಸ್ಮತಿಗೆ 453482 ಮತ ಪಡೆದಿದ್ದಾರೆ.