ಅಮೆರಿಕಾದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡ ರಾಹುಲ್ ಗಾಂಧಿ?
ಬೇರ್ಕೆಲಿ(ಸೆ.12): ಆಗಾಗ ಸಣ್ಣಪುಟ್ಟ ತಪ್ಪುಗಳನ್ನು ಮಾಡಿಕೊಳ್ಳುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಭಾಷಣ ಮಾಡುವಾಗ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.
' ಇಂಡಿಯಾ ಅಟ್ 70: ರಿಪ್ಲೆಕ್ಷನ್ ಆನ್ ದ ಪಾತ್ ಫಾರ್ವರ್ಡ್' ಎಂಬ ವಿಷಯವಾಗಿ ತಮ್ಮ ಭಾಷಣದ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವದ ಪ್ರಸ್ತುತತೆಯ ಬಗ್ಗೆ ಮಾತನಾಡುತ್ತಿದ್ದರು. ಇದೇ ವೇಳೆಯಲ್ಲಿ ಭಾರತದ ಕೆಳಮನೆಯ ಒಟ್ಟು ಸಂಸದರ ಬಗ್ಗೆ ಹೇಳುವಾಗ ಯಡವಟ್ಟು ಮಾಡಿಕೊಂಡರು. 545 ಎಂದು ಹೇಳುವ ಬದಲು 546 ಎಂದು ಉಚ್ಛರಿಸಿದರು. ಈ ತಪ್ಪು ಹೇಳಿಕೆ ಸಾಮಾಜಿಕ ಮಾಧ್ಯಮ ಅದರಲ್ಲೂ ಟ್ವಿಟರ್'ನಲ್ಲಿ ವೈರಲ್ ಆಗಿದೆ. ಸದಾ ರಾಜಕಾರಣದಲ್ಲೆ ಮಿಂದುತ್ತಿರುವ ರಾಹುಲ್ ಗಾಂಧಿಯ ಈ ತಪ್ಪಿಗೆ ಟ್ವಿಟಿಗರು ಕುಹುಕವಾಡಿದ್ದಾರೆ.
