ಆಗ್ರಾ (ಅ.02): ಕಿಸಾನ್ ಮಹಾಯಾತ್ರೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಿನ್ನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಾರಾಜ ಅಗ್ರಸೇನಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವ ಸಂದರ್ಭದಲ್ಲಿ ವಿದ್ಯುತ್ ತಂತಿ ಅವರ ತಲೆಗೆ ತಾಗಿದೆ.

ತಕ್ಷಣ ಬಗ್ಗಿದ ರಾಹುಲ್ ಗಾಂಧಿ ಆ ಬಗ್ಗೆ ಸ್ಥಳೀಯ ಅರ್ಚಕರ ಗಮನ ಸೆಳೆದಿದ್ದಾರೆ. ಆ ಸಮಯದಲ್ಲಿ ತಂತಿಯಲ್ಲಿ ವಿದ್ಯುತ್ ಪ್ರವಾಹವಿತ್ತೋ ಇಲ್ಲವೋ ಎಂದು ಖಾತ್ರಿಯಾಗಿಲ್ಲ.

ಬಳಿಕ ರಕ್ಷಣಾ ಸಿಬ್ಬಂದಿ ಆ ತಂತಿಯನ್ನು ಮೇಲೆತ್ತಿ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗಿಳಿಯಲು ಸಹಕರಿಸಿದ್ದಾರೆ.