ಇನ್ನು ಮುಂದೆ ಹೆಲಿಕಾಪ್ಟರ್​'ನಲ್ಲಾಗಲಿ, ಯಾವುದೋ ಲೆಟರ್'ನಲ್ಲಾಗಲಿ ಟಿಕೆಟ್ ಬರಲ್ಲ. ಜನನಾಯಕರಿಗೆ ಮಾತ್ರ ಟಿಕೆಟ್ ಅಂತ ಹೇಳಿದ್ದಾರೆ ರಾಹುಲ್ ಗಾಂಧಿ. ಈ ಮೂಲಕ ಹಾಲಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಸುಖಾ-ಸುಮ್ಮನೆ ಟಿಕೆಟ್ ಕೊಡಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ರವಾನೆ ಮಾಡಿದ್ದಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎನ್ನುವುದರ ಮೂಲಕ ಸಿದ್ದರಾಮಯ್ಯಗೂ ಟಾಂಗ್ ನೀಡಿದ್ದಾರೆ.

ಬೆಂಗಳೂರು(ಜೂ.13): ಇನ್ನು ಮುಂದೆ ಹೆಲಿಕಾಪ್ಟರ್​'ನಲ್ಲಾಗಲಿ, ಯಾವುದೋ ಲೆಟರ್'ನಲ್ಲಾಗಲಿ ಟಿಕೆಟ್ ಬರಲ್ಲ. ಜನನಾಯಕರಿಗೆ ಮಾತ್ರ ಟಿಕೆಟ್ ಅಂತ ಹೇಳಿದ್ದಾರೆ ರಾಹುಲ್ ಗಾಂಧಿ. ಈ ಮೂಲಕ ಹಾಲಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಸುಖಾ-ಸುಮ್ಮನೆ ಟಿಕೆಟ್ ಕೊಡಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ರವಾನೆ ಮಾಡಿದ್ದಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎನ್ನುವುದರ ಮೂಲಕ ಸಿದ್ದರಾಮಯ್ಯಗೂ ಟಾಂಗ್ ನೀಡಿದ್ದಾರೆ.

2018ರ ಚುನಾವಣೆಗೆ ಸನ್ನದ್ಧರಾಗುವಂತೆ ಕಾರ್ಯಕರ್ತರಿಗೆ ರಾಹುಲ್ ಕರೆ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಪಕ್ಷದ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸರ್ವ ಸದಸ್ಯರ ಸಭೆಯ ವೇದಿಕೆಯಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಸೇರಿ ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವೇಳೆ, ಮಾತನಾಡಿದ ರಾಹುಲ್ ಗಾಂಧಿ, ಇನ್ನೂ ಮುಂದೆ ಹೆಲಿಕಾಪ್ಟರ್ ನಲ್ಲಾಗಲಿ, ಯಾವುದೋ ಪತ್ರದಲ್ಲಾಗಿ ಟಿಕೆಟ್ ಬರಲ್ಲ. ಬದಲಾಗಿ ಯಾರು ಜನನಾಯಕರಿದ್ದಾರೋ ಅಂತವರಿಗೆ ಮಾತ್ರ ಟಿಕೆಟ್ ನೀಡೋದಾಗಿ ಹೇಳಿದರು. ಈ ಮೂಲಕ ಹಾಲಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ಇದಕ್ಕೂ ಮೊದಲು ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀಲಾಂಚ್ ಕಾರ್ಯಕ್ರಮ ನಡೆಯಿತು. ಪತ್ರಿಕೆಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ರೀಲಾಂಚ್ ಮಾಡಿದರು. ಈ ಸಮಾರಂಭದಲ್ಲಿ ಎಐಸಿಸಿ ಉಪಾಧ್ಯಕ್ಷರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಸತ್ಯದ ಶಕ್ತಿಯನ್ನು ಹೊಸಕಿ ಹಾಕಲು ಅಧಿಕಾರದ ಶಕ್ತಿ ಪ್ರಯತ್ನಿಸುತ್ತಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಒಟ್ಟಾರೆ, ರಾಹುಲ್​ ಗಾಂಧಿ ಮುಂದಿನ ಲೋಕಸಭಾ ಚುನಾವಣೆಗೂ ಕರ್ನಾಟಕವೇ ಕೇಂದ್ರ ಸ್ಥಾನವಾಗಲಿದೆ ಎಂಬ ಸೂಚನೆಯನ್ನ ಈ ಮೂಲಕ ರವಾನಿಸಿದ್ದಾರೆ.