ಇತ್ತೀಚಿಗೆ ರಾಹುಲ್ ಗಾಂಧಿ ವಿದೇಶ ಪ್ರವಾಸ ಹೆಚ್ಚಾಗಿದೆ. ಯಾರ ಕೈಗೂ ಸುಲಭವಾಗಿ ಸಿಗುತ್ತಿಲ್ಲ. ಇನ್ನು ಸೋನಿಯಾ ಗಾಂಧಿಯವರಂತೂ ಕಾಂಗ್ರೆಸ್ಸಿಗರ ಜೊತೆ ಮಾತಿಗೆ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. 

ನವದೆಹಲಿ (ಜು. 03): ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ಟೀಕಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಸ್ವತಃ ತಿಂಗಳಿಗೊಮ್ಮೆ ವಿದೇಶದಲ್ಲಿರುತ್ತಾರೆ.

ಇಫ್ತಾರ್‌ ಕೂಟ ನಡೆಸಿದ ನಂತರ ಮತ್ತೆ ಹೊರಗೆ ಹಾರಿರುವ ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್‌ ನಾಯಕರಿಗೆ ಬಹಳಾನೇ ಮುಜುಗರವಾಗುತ್ತದೆ. ಕರ್ನಾಟಕದ ಕಾಂಗ್ರೆಸ್‌ ನಾಯಕರಂತೂ ಖಾಸಗಿಯಾಗಿ ‘ಏನ್‌ ಸರ್‌, ನಾವು ಯಾರ ಹತ್ತಿರ ದುಃಖ ಹೇಳಿಕೊಳ್ಳೋದು? ಸೋನಿಯಾ ಗಾಂಧಿ ಟೈಮೇ ಕೊಡೋಲ್ಲ. ರಾಹುಲ್ ಗಾಂಧಿಗೆ ಟೈಮೇ ಸಿಗೋಲ್ಲ. ದೇವೇಗೌಡರು ನಮ್ಮನ್ನು ಆಪೋಶನ ತೆಗೆದುಕೊಂಡ ಮೇಲೆ ಗೊತ್ತಾಗುತ್ತದೆ ಬಿಡಿ ಹಣೆಬರಹ’ ಎನ್ನುತ್ತಿರುತ್ತಾರೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ವಿಶೇಷ ಪ್ರತಿನಿಧಿ