ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಈತ, ರಾಹುಲ್ ದೇಶದ ಪ್ರಧಾನಿಯಾಗುವವರೆಗೂ ತಾನು ಮದುವೆಯಾಗುವುದಿಲ್ಲ, ಜತೆಗೆ ಕಾಲಿನಲ್ಲಿ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾನೆ.
ನಾನು ಮದುವೆ ಆಗಲ್ಲ, ಚಪ್ಪಲಿನೂ ಹಾಕಲ್ಲ... ಇಂಥದೊಂದು ಶಪಥ ಮಾಡಿದ್ದಾನೆ ಈ ಹರಿಯಾಣದ ಹುಡುಗ... ಹರಿಯಾಣದ ಜಿಂಡ್ನಲ್ಲಿ ವಾಸವಾಗಿರುವ 23 ವರ್ಷದ ದಿನೇಶ್ ಶರ್ಮಾ, ಕಳೆದ 2005ರ ನವೆಂಬರ್ 21ರಿಂದ ಚಪ್ಪಲಿ ಹಾಕಿಕೊಳ್ಳುವುದನ್ನ ಬಿಟ್ಟಿದ್ದಾನೆ. ಜತೆಗೆ ಕಳೆದ ಏಳು ವರ್ಷದಿಂದ ರಾಹುಲ್ ಗಾಂಧಿ ಭಾಗಿಯಾಗುತ್ತಿರುವ ಸಮಾವೇಶ, ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಿರುತ್ತಾನೆ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಈತ, ರಾಹುಲ್ ದೇಶದ ಪ್ರಧಾನಿಯಾಗುವವರೆಗೂ ತಾನು ಮದುವೆಯಾಗುವುದಿಲ್ಲ, ಜತೆಗೆ ಕಾಲಿನಲ್ಲಿ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾನೆ.

