ಎಐಸಿಸಿ ಅದ್ಯಕ್ಷರಾಗಿ ರಾಹುಲ್ ಅಧಿಕಾರ ವಹಿಸಿಕೊಂಡ ಮೇಲೆ ಆ ಪಕ್ಷದ ನಾಯಕರೆಲ್ಲ ಹಿಡಿತ ತಪ್ಪಿದ್ದಾರೆ. ಕಂಡ ಕಂಡ ಹಾಗೆ ಮನಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ ಎಂದು  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ಮಾಡಿದ್ದಾರೆ.

ನವದೆಹಲಿ[ಜೂ.23] ಎಐಸಿಸಿ ಅದ್ಯಕ್ಷರಾಗಿ ರಾಹುಲ್ ಅಧಿಕಾರ ವಹಿಸಿಕೊಂಡ ಮೇಲೆ ಆ ಪಕ್ಷದ ನಾಯಕರೆಲ್ಲ ಹಿಡಿತ ತಪ್ಪಿದ್ದಾರೆ. ಕಂಡ ಕಂಡ ಹಾಗೆ ಮನಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ಮಾಡಿದ್ದಾರೆ.

ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ನಾಯಕ ಗುಲಾಂ ನಬಿ ಆಜಾದ್‌ ನೀಡಿದ ಹೇಳಿಕೆ ವಿವಾದ ಎಬ್ಬಿಸಿದ್ದು ಇದೀಗ ಇದನ್ನೆ ಇಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ಮೇಲೆ ದಾಳಿ ಆರಂಭಿಸಿದೆ.

ಪಾಕಿಸ್ತಾನದ ಉಗ್ರ ಸಂಘಟನೆಯೊಂದು ಇಮಥ ಹೇಳಿಕೆ ನೀಡಿದ್ದರೆ ಯಾವ ಆಶ್ಚರ್ಯ ಇರುತ್ತಿರಲಿಲ್ಲ. ಆದರೆ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಆ ಪಕ್ಷದವರಿಗೆ ತಾವು ಏನು ಹೇಳುತ್ತಿದ್ದೇವೆ ಎಂಬುದೇ ತಿಳಿಯದಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ತಾನು ಯೋಚನೆ ಮಾಡುವ ರೀತಿಯನ್ನೇ ಬದಲಾಯಿಸಿಕೊಂಡಿದೆ. ರಾಹುಲ್ ಅಧ್ಯಕ್ಷರಾದ ಮೇಲೆ ಇಂಥ ಘಟನಾವಳಿಗಳು ಹೆಚ್ಚುತ್ತಿದ್ದು ದೇಶದ ಸಮಗ್ರತೆ ವಿಚಾರದಲ್ಲಿಯೂ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.