ಮೋದಿಯವರೇ.. ಬನ್ನಿ. ನೋಡೇಬಿಡೋಣ? ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಓಪನ್ ಚಾಲೆಂಜ್

First Published 23, Apr 2018, 7:21 PM IST
Rahul Gandhi dares PM Modi for a 15-minute Debate
Highlights

ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷರು ಇದೇ ಮೊದಲ ಬಾರಿಗೆ ನೇರಾನೇರಾ ಸವಾಲು ಹಾಕಿದ್ದಾರೆ. 15 ನಿಮಿಷ ನನ್ನ ಜೊತೆ ಮಾತನಾಡಿ ಉತ್ತರ ಕೊಡಿ ಎಂದಿದ್ದಾರೆ. ಜಮ್ಮುವಿನ ಕಠುವಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಘಟನೆ ನಂತರ ದೇಶಾದ್ಯಂತ ಬಿಜೆಪಿ ನಾಯಕರ ವಿರುದ್ಧ ಬೇಟಿ ಬಚಾವೋ ಆಂದೋಲನ ಮಾಡಬೇಕಿದೆ ಎಂದಿದ್ದಾರೆ.

ನವದೆಹಲಿ(ಏ.23): ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಸವಾಲು ಹಾಕಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಬಂಡಾಯ, ನೀರವ್ ಮೋದಿ,ರಫೇಲ್ ಯುದ್ಧ ವಿಮಾನ ಖರೀದಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ ನನ್ನೊಂದಿಗೆ ಮೋದಿ 15 ನಿಮಿಷ ಚರ್ಚೆ ಮಾಡಲಿ ಎಂದು ಬಹಿರಂಗ ಸವಾಲೆಸಗಿದ್ದಾರೆ.

ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷರು ಇದೇ ಮೊದಲ ಬಾರಿಗೆ ನೇರಾನೇರಾ ಸವಾಲು ಹಾಕಿದ್ದಾರೆ. 15 ನಿಮಿಷ ನನ್ನ ಜೊತೆ ಮಾತನಾಡಿ ಉತ್ತರ ಕೊಡಿ ಎಂದಿದ್ದಾರೆ. ಜಮ್ಮುವಿನ ಕಠುವಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಘಟನೆ ನಂತರ ದೇಶಾದ್ಯಂತ ಬಿಜೆಪಿ ನಾಯಕರ ವಿರುದ್ಧ ಬೇಟಿ ಬಚಾವೋ ಆಂದೋಲನ ಮಾಡಬೇಕಿದೆ ಎಂದಿದ್ದಾರೆ.

ಮೋದಿಯವರು ಸಂಸತ್ತಿನಲ್ಲಿ ನನ್ನನ್ನು ಎದುರಿಸಲು ಸಾಧ್ಯವಿಲ್ಲ. ಆದ ಕಾರಣ ಚರ್ಚೆಗೆ ಬನ್ನಿ ಎಂದಿದ್ದಾರೆ. ಮುಖ್ಯ ನ್ಯಾಯಮೂರ್ತಿ ವಿರುದ್ಧದ ವಿರೋಧ ಪಕ್ಷಗಳ ವಾಗ್ದಂಡನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದರು.     

loader