ನ.8 ರಂದು ಸರ್ಕಾರ ಕೈಗೊಂಡಿರುವ ನಿರ್ಧಾರವು ಕಾಳಧನದ ವಿರುದ್ಧವಾಗಿರದೇ, ಬಡವರ ಹಾಗೂ ರೈತರ ವಿರುದ್ಧವಾಗಿದೆ, ಎಂದು ಜನಾಕ್ರೋಶ ರ್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ಜುನಾಪುರ, ಉತ್ತರ ಪ್ರದೇಶ (ಡಿ.19): ನೋಟು ಅಮಾನ್ಯ ಕ್ರಮದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಕ್ರಮವು ಕಾಳಧನದ ವಿರುದ್ಧವಾಗಿರದೇ, ದೇಶದ ಬಡಜನ ಹಾಗೂ ರೈತರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ನ.8 ರಂದು ಸರ್ಕಾರ ಕೈಗೊಂಡಿರುವ ನಿರ್ಧಾರವು ಕಾಳಧನದ ವಿರುದ್ಧವಾಗಿರದೇ, ಬಡವರ ಹಾಗೂ ರೈತರ ವಿರುದ್ಧವಾಗಿದೆ, ಎಂದು ಜನಾಕ್ರೋಶ ರ್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ನೋಟು ಅಮಾನ್ಯ ಕ್ರಮವು ಸರ್ಜಿಕಲ್ ದಾಳಿಯಲ್ಲ, ಬದಲಾಗಿ ಜನಸಾಮಾನ್ಯರ ಮೇಲೆ ನಡೆಸಿರುವ ಬಾಂಬ್ ದಾಳಿಯಗಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ರೈತರ ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೆವು, ಆದರೆ ಪ್ರಧಾನಿ ಆ ಬಗ್ಗೆ ಯಾವುದೇ ಸಕಾರಾತ್ಮಕ ಉತ್ತರವನ್ನು ನೀಡಿಲ್ಲವೆಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಡಿಸಿದ್ದಾರೆ.
ಪ್ರಧಾನಿ ವಿರುದ್ಧ ಧಿಕ್ಕಾರ ಕೂಗುವುದನ್ನು ಆಕ್ಷೇಪಿಸಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ನಮ್ಮ ಹೋರಾಟ ರಾಜಕೀಯವಾದುದ್ದು, ಆದುದರಿಂದ ಅವರಿಗೆ ಧಿಕ್ಕಾರ ಕೂಗಬೇಡಿ; ಅಂಥ ಭಾಷೆಯನ್ನು ಆರೆಸ್ಸೆಸ್ ಬಳಸುತ್ತದೆ, ಕಾಂಗ್ರೆಸ್ ಅಲ್ಲ ಎಂದು ಹೇಳಿದರು.